ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಬೃಹತ್ ಪ್ರತಿಮೆಯನ್ನು ಹಿನ್ನೆಲೆಯಾಗಿ ಹೊಂದಿರುವ ಈ ಚಿತ್ರ ನೋಡಿರುವುದು ನೆನಪಿದೆಯೇ? ನರ್ಮದಾ ತಟದಲ್ಲಿ ಪಟೇಲರ ಬೃಹತ್ ಪ್ರತಿಮೆ ಅನಾವರಣಕ್ಕೆ ಕೆಲ ದಿನಗಳ ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಈ ಚಿತ್ರ ‘ಏಕತಾ ಪ್ರತಿಮೆ’ಯ ಹಿನ್ನೆಲೆಯಲ್ಲಿ ಬಡತನದ ವೈರುಧ್ಯ ಬಿಂಬಿಸುತ್ತದೆ ಎಂದು ಹಲವರು ಬರೆದುಕೊಂಡರು.

ಈ ಚಿತ್ರವು 182 ಮೀಟರ್ ಎತ್ತರದ ಬೃಹತ್ ಪ್ರತಿಮೆಯ ಎದುರು ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಡನೆ ಫುಟ್‌ಪಾತ್‌ನಲ್ಲಿ ಊಟ ಮಾಡುತ್ತಿರುವುದನ್ನು ಬಿಂಬಿಸುತ್ತದೆ. ‘ಈ ಚಿತ್ರ ನೋಡಿದ ನಂತರ ಮಾತೇ ಹೊರಡಲಿಲ್ಲ’ ಎಂದು ಹಲವು ಟ್ವಿಟರ್‌ನಲ್ಲಿ ಹಂಚಿಕೊಂಡರು.

ಆದರೆ ಈ ಚಿತ್ರ ನಿಜವಾದುದಲ್ಲ ಎಂದು ‘ಬೂಮ್‌ಲೈವ್’ ಜಾಲತಾಣ ವರದಿ ಮಾಡಿದೆ.ಪಟೇಲರ ಪ್ರತಿಮೆಯಚಿತ್ರಕ್ಕೆರಾಯಿಟರ್ಸ್‌ನ ಛಾಯಾಗ್ರಾಹಕ ಅಮಿತ್ ಡೇವ್ ಫೆ.26, 2010ರಲ್ಲಿ ಅಹಮದಾಬಾದ್‌ನಲ್ಲಿ ತೆಗೆದ ಈ ಚಿತ್ರವನ್ನು ಕೊಲಾಜ್ ಮಾಡಲಾಗಿದೆ. ‘ಫುಟ್‌ಪಾತ್‌ನಲ್ಲಿ ಆಹಾರ ಸೇವಿಸುತ್ತಿರುವ ಬಡಮಕ್ಕಳು’ ಶೀರ್ಷಿಕೆಯಡಿ ಈ ಚಿತ್ರವನ್ನು 2010ರ ಕೇಂದ್ರ ಬಜೆಟ್‌ಗೂ ಮುನ್ನ ರಾಯಿಟರ್ಸ್ ಪ್ರಕಟಿಸಿತ್ತು.

ವಿಶ್ವದ ಅತ್ಯಂತ ದೊಡ್ಡ ಪ್ರತಿಮೆ ಎನ್ನುವ ಶ್ರೇಯಕ್ಕೆ ಪಾತ್ರವಾಗಿರುವ ಸರ್ದಾರ್ ಪಟೇಲರ ಪ್ರತಿಮೆಯನ್ನು ನರ್ಮದಾ ದಂಡೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಲಾರ್ಸನ್ ಅಂಡ್ ಟರ್ಬೊ ಕಂಪನಿಯು ಈ ಪ್ರತಿಮೆಯನ್ನು ₹2989 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.