ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರಪ್ರದೇಶ ಸರ್ಕಾರ ರಚನೆ: ರಾಜ್ಯಪಾಲರನ್ನು ಬೇಟಿಯಾಗಲಿರುವ ಜಗನ್ ಮೋಹನ್‌ ರೆಡ್ಡಿ

Last Updated 25 ಮೇ 2019, 16:50 IST
ಅಕ್ಷರ ಗಾತ್ರ

ಅಮರಾವತಿ:ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ (ವೈಎಸ್‌ಆರ್‌ಸಿ)ನಾಯಕ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರು ನೂತನ ಸರ್ಕಾರ ರಚನೆ ಸಂಬಂಧಆಂಧ್ರ ಮತ್ತು ತೆಲಂಗಾಣದ ರಾಜ್ಯಪಾಲರನ್ನು ಹೈದರಾಬಾದ್‌ನಲ್ಲಿರುವರಾಜ್ಯ ಭವನದಲ್ಲಿಶನಿವಾರ ಸಂಜೆ ಭೇಟಿಯಾಗಲಿದ್ದಾರೆ.

ರಾಜ್ಯಪಾಲರ ಭೇಟಿಯಬಳಿಕ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರನ್ನು ಭೇಟಿಯಾಗಲಿದ್ದು, ಭಾನುವಾರದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.

ಆಂಧ್ರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ151 ಕ್ಷೇತ್ರಗಳಲ್ಲಿ ಜಯಗಳಿಸಿದ ವೈಎಸ್ಅರ್ ಕಾಂಗ್ರೆಸ್ಜಗನ್ ಮೋಹನ್‌ ರೆಡ್ಡಿ ಅವರನ್ನು ಶಾಸಕಾಂಗಪಕ್ಷದ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಿದೆ. ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT