ನವದೆಹಲಿ: ‘ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಅಥವಾ ದೂರ ಶಿಕ್ಷಣ ಮಂಡಳಿ (ಡಿಇಸಿ) ಗುರುತಿಸಿದ ದೂರ ಶಿಕ್ಷಣ ಸಂಸ್ಥೆ
ಗಳು ನೀಡುವ ಪ್ರಮಾಣಪತ್ರವು ಸಾಂಪ್ರದಾಯಿಕ ಶಿಕ್ಷಣ ಸಂಸ್ಥೆಗಳು ನೀಡುವ ಪ್ರಮಾಣಪತ್ರಕ್ಕೆ ಸಮ’ ಎಂದು ಯುಜಿಸಿ ಸೂಚನೆ ಹೊರಡಿಸಿದೆ.
ಆ ಮೂಲಕ, ಉದ್ಯೋಗ ಹಾಗೂ ಇನ್ನಿತರ ಎಲ್ಲಾ ದೃಷ್ಟಿಯಿಂದ ದೂರ ಶಿಕ್ಷಣ ಕೋರ್ಸ್ ಬಗೆಗೆ ಅಭ್ಯರ್ಥಿಗಳಲ್ಲಿರುವ ಗೊಂದಲಕ್ಕೆ ತೆರೆ ಎಳೆದಿದೆ.
‘ತಾಂತ್ರಿಕ ಕೋರ್ಸ್‌ಗಳನ್ನು ಮುಕ್ತ ಮತ್ತು ದೂರ ಶಿಕ್ಷಣ ರೂಪದಲ್ಲಿ ನೀಡುವುದು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಕಳೆದ ತಿಂಗಳು ತೀರ್ಪು ನೀಡಿತ್ತು. ತೀರ್ಪಿನ ಸಂಬಂಧ ಸ್ಪಷ್ಟನೆ ನೀಡುವಂತೆ ಉದ್ಯೋಗದಾತ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಮಾನವ ಸಂಪಂನ್ಮೂಲ ಅಭಿವೃದ್ಧಿ ಸಚಿವಾಲಯ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಮಂಡಳಿ, ಯುಜಿಸಿಗೆ ಪತ್ರ ಬರೆದಿದ್ದವು.
‘ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೇ, ಹೆಚ್ಚು ಜನರು ಉನ್ನತ ಶಿಕ್ಷಣ ಪಡೆಯಲು ಮುಕ್ತ ಮತ್ತು ದೂರ ಶಿಕ್ಷಣ ವ್ಯವಸ್ಥೆಯು ಗಣನೀಯ ಕಾಣಿಕೆ ನೀಡಿದೆ’ ಎಂದು ಯುಜಿಸಿಯ ನೂತನ ಕಾರ್ಯದರ್ಶಿ ರಜನೀಶ್ ಜೈನ್ ಹೇಳಿದ್ದಾರೆ.
‘ಆದರೆ, ಮಾನ್ಯತೆ ಇಲ್ಲದ ಸಂಸ್ಥೆಗಳ ಪ್ರಮಾಣಪತ್ರಗಳು ಉದ್ಯೋಗ ನೇಮಕಾತಿ, ಬಡ್ತಿ ಮತ್ತು ಉನ್ನತ ಶಿಕ್ಷಣದ ಆಕಾಂಕ್ಷೆಗೆ ಅಡ್ಡಿಯಾಗುತ್ತದೆ. ಇದರಿಂದ ಶಿಕ್ಷಣದ ಉದ್ದೇಶವೇ ಸೋಲುತ್ತದೆ’ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.