ಕರುಣಾನಿಧಿ ಅಂತಿಮ ದರ್ಶನ: ನೂಕುನುಗ್ಗಲಿಗೆ ಇಬ್ಬರು ಸಾವು, 30 ಮಂದಿಗೆ ಗಾಯ 

7

ಕರುಣಾನಿಧಿ ಅಂತಿಮ ದರ್ಶನ: ನೂಕುನುಗ್ಗಲಿಗೆ ಇಬ್ಬರು ಸಾವು, 30 ಮಂದಿಗೆ ಗಾಯ 

Published:
Updated:

ಚೆನ್ನೈ: ಇಲ್ಲಿನ ರಾಜಾಜಿ ಹಾಲ್‌ನಲ್ಲಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ಉಂಟಾದ ನೂಕು ನುಗ್ಗಲಿಗೆ ಇಬ್ಬರು ಮೃತಪಟ್ಟಿದ್ದಾರೆ. 

ಇದೇ ವೇಳೆ 30ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಅವರನ್ನು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಅಂತಿಮ ದಶರ್ನಕ್ಕಾಗಿ ರಾಜಾಜಿ ಹಾಲ್‌ನ ಹೊರಗೆ ಒಂದು ಲಕ್ಷ ಮಂದಿ ಸೇರಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆ ಹಾಲ್‌ನ ಬಾಗಿಲನ್ನು ಬಂದ್‌ ಮಾಡಲಾಗಿದೆ. 

ಮರೀನಾ ಬೀಚ್‌ನಲ್ಲಿ ಕರುಣಾನಿಧಿ ಅವರ ಅಂತ್ಯ ಸಂಸ್ಕಾರ ನಡೆಯಲಿದ್ದು, ಎಲ್ಲಾ ಸಿದ್ಧತೆಗಳು ನಡೆದಿವೆ. ಸಂಜೆ 4 ಗಂಟೆಯಿಂದ ರಾಜಾಜಿ ಹಾಲ್‌ನಿಂದ ಅಂತಿಮ ಯಾತ್ರೆ ಆರಂಭವಾಗಲಿದೆ.

ಅಂತಿಮ ದರ್ಶನಕ್ಕೆ ಬಂದಿರುವ ಪ್ರತಿಯೊಬ್ಬರು ಶಾಂತ ರೀತಿಯಲ್ಲಿ ವರ್ತಿಸಬೇಕೆಂದು ಮನವಿ ಮಾಡುತ್ತೇನೆ. ಇದಕ್ಕಿಂತ ಹೆಚ್ಚಿನದಾಗಿ ನನಗೇನೂ ಬೇಡ. ಇದು ನೀವು ಕರುಣಾನಿಧಿ ಅವರಿಗೆ ನೀಡುವ ಗೌರವ ಎಂದು ಎಂ.ಕೆ ಸ್ಟಾಲಿನ್ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !