ಶನಿವಾರ, ಜೂನ್ 19, 2021
23 °C

ಬಾಗಿಲು ಮುಚ್ಚಿದ ಕೇದಾರನಾಥ ದೇವಾಲಯ

ಪಿಟಿಐ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್‌ : ಚಳಿಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಹಿಮಾಲಯ ತಪ್ಪಲಿನಲ್ಲಿರುವ ಕೇದಾರನಾಥ ದೇವಾಲಯವನ್ನು ಮಂಗಳವಾರ ಮುಚ್ಚಲಾಗಿದೆ.

ಬೆಳಿಗ್ಗೆ 8.30ಕ್ಕೆ ದೇವಸ್ಥಾನದ ಬಾಗಿಲು ಮುಚ್ಚುವ ಸಂದರ್ಭ ನಡೆದ ಪೂಜೆಯಲ್ಲಿ ಸುಮಾರು 1,200 ಭಕ್ತರು ಭಾಗವಹಿಸಿದ್ದರು ಎಂದು ದೇವಾಲಯದ ಮೂಲಗಳು ಹೇಳಿವೆ. ದೇವಾಲಯದಲ್ಲಿ ಪೂಜಿಸುತ್ತಿದ್ದ ಶಿವನ ಮೂರ್ತಿಯನ್ನು ಹೂಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಇರಿಸಿ ಉಖೀಮಠದ ಓಂಕಾರೇಶ್ವರ ದೇವಾಲಯದತ್ತ ಭಕ್ತರು ಮೆರವಣಿಗೆಯಲ್ಲಿ ಕೊಂಡೊಯ್ದರು. ಈ ಮೆರವಣಿಗೆಯು ಇದೇ 31ರಂದು ಉಖೀಮಠ ತಲುಪಲಿದೆ. ಮುಂದಿನ ಆರು ತಿಂಗಳ ಕಾಲ ಇದೇ ದೇವಾಲಯದಲ್ಲಿ ಶಿವದೇವರ ಪೂಜೆ ನಡೆಯಲಿದೆ.  

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು