ಜಪಾನ್‌ ಮಹಾಮಳೆ, ಸಾವಿನ ಸಂಖ್ಯೆ 100ಕ್ಕೇರಿಕೆ

7
ಪ್ರಧಾನಿ ಶಿಂಜೊ ಅಬೆ ವಿದೇಶ ಪ್ರವಾಸ ರದ್ದು

ಜಪಾನ್‌ ಮಹಾಮಳೆ, ಸಾವಿನ ಸಂಖ್ಯೆ 100ಕ್ಕೇರಿಕೆ

Published:
Updated:
ಹಿರೋಶಿಮಾದ ಕುಮನೊ ಪಟ್ಟಣದಲ್ಲಿ ಭಾರಿ ಮಳೆಗೆ ಕುಸಿದುಬಿದ್ದ ಮನೆಯಲ್ಲಿ ಕಾಣೆಯಾದವರನ್ನು ಹುಡುಕುತ್ತಿರುವ ರಕ್ಷಣಾ ಕಾರ್ಯಕರ್ತರು –ಎಎಫ್‌ಪಿ ಚಿತ್ರ

ಕುಮನೊ, ಜಪಾನ್‌: ಜಪಾನ್‌ನಲ್ಲಿ ಸುರಿದ ಮಹಾಮಳೆಗೆ ಸಾವನ್ನಪ್ಪಿದವರ ಸಂಖ್ಯೆ 100ಕ್ಕೇರಿದೆ. ದೇಶದ ಪಶ್ಚಿಮ, ಮಧ್ಯಭಾಗ ಈಗಲೂ ಮಳೆನೀರಿನಿಂದ ಮಳುಗಡೆಯಾಗಿದೆ.

ಪ್ರವಾಹದ ನೀರು ಇಳಿಮುಖಗೊಂಡ ಸ್ಥಳಗಳಲ್ಲಿ ರಕ್ಷಣಾ ಕಾರ್ಯ ಚುರುಕುಗೊಂಡಿದ್ದು, ಕೆಸರು, ಅವಶೇಷಗಳ ಅಡಿಯಲ್ಲಿ ಹಲವರ ಮೃತದೇಹಗಳು ಪತ್ತೆಯಾಗಿವೆ.

‘ಅವಶೇಷಗಳ ಅಡಿಯಲ್ಲಿ ಇನ್ನೂ ಕೆಲವರು ಬದುಕುಳಿದಿರುವ ಸಾಧ್ಯತೆಗಳಿವೆ’ ಎಂದು ರಕ್ಷಣಾ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರಿ ಕಾರ್ಯಾಚರಣೆ

 ‘73 ಸಾವಿರ ಪೊಲೀಸರು, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, 700 ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗಿದೆ’ ಎಂದು ಸರ್ಕಾರದ ವಕ್ತಾರ ಯೋಶಿದೆ ಸುಗಾ ತಿಳಿಸಿದ್ದಾರೆ.

ಕುಮನೊದಲ್ಲಿ ಕುಸಿದುಬಿದ್ದ ಮನೆ, ಮರ ತೆರವುಗೊಳಿಸಲು ಸೈನಿಕರು, ತುರ್ತು ನಿಗಾ ವ್ಯವಸ್ಥೆಯ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಮತ್ತೆ ಭೂಕುಸಿತ ಭೀತಿ 

‘ನಗರದಲ್ಲಿ ಮತ್ತೆ ಭೂಕುಸಿತ ಸಂಭವಿಸುವ ಸಾಧ್ಯತೆಯಿದ್ದು, ನಿವಾಸಿಗಳು ಎಚ್ಚರ ವಹಿಸಬೇಕು’  ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಅಂದಾಜಿನ ಪ್ರಕಾರ, ಇದುವರೆಗೆ 50 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಭೂಕುಸಿತ, ಪ್ರವಾಹ ಸಂಭವಿಸಿರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಇನ್ನೂ ಕೆಲವರಿಗೆ ಮನೆಯಲ್ಲಿ ಉಳಿಯುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !