16ನೇ ಲೋಕಸಭೆ ಕೊನೆಯ ಅಧಿವೇಶನಕ್ಕೆ ತೆರೆ

7
ಮಂಧ್ಯಂತರ ಬಜೆಟ್ ಅಂಗೀಕಾರ; ಅನುಮೋದನೆ ಪಡೆಯದ ಪೌರತ್ವ, ತ್ರಿವಳಿ ತಲಾಖ್

16ನೇ ಲೋಕಸಭೆ ಕೊನೆಯ ಅಧಿವೇಶನಕ್ಕೆ ತೆರೆ

Published:
Updated:

ನವದೆಹಲಿ : ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಂಡಿಸಿದ್ದ ಮಧ್ಯಂತರ ಬಜೆಟ್‌ಗೆ ಅನುಮೋದನೆ ಸಿಕ್ಕಿದ್ದು, 16ನೇ ಲೋಕಸಭೆಯ ಕೊನೆಯ ಅಧಿವೇಶನಕ್ಕೆ ಬುಧವಾರ ತೆರೆಬಿದ್ದಿತು.

ರಾಜ್ಯಸಭೆಯಲ್ಲಿ ಯಾವುದೇ ಚರ್ಚೆ ಇಲ್ಲದೆ ಬಜೆಟ್‌ಗೆ ಅಂಗೀಕಾರ ಸಿಕ್ಕಿತು. ಆದರೆ ಮಹತ್ವದ ಪೌರತ್ವ ತಿದ್ದುಪಡಿ ಮಸೂದೆ ಹಾಗೂ ತ್ರಿವಳಿ ತಲಾಖ್ ಮಸೂದೆಗಳು ಸದನದ ಒಪ್ಪಿಗೆ ಪಡೆಯದೆ ಹಾಗೆಯೇ ಉಳಿದವು. 

ಈ ಬಾರಿ ಮಹತ್ವದ ಜಿಎಸ್‌ಟಿ ಸೇರಿದಂತೆ 219ರ ಪೈಕಿ 203 ಮಸೂದೆಗಳು ಅಂಗೀಕಾರ ಆಗಿವೆ. 17ರ ಪೈಕಿ ಎಂಟು ಅಧಿವೇಶನಗಳು ಶೇ 100ರಷ್ಟು ಯಶಸ್ಸು ಕಂಡಿವೆ. ಲೋಕಸಭೆಯು ಒಟ್ಟಾರೆ ಶೇ 85ರಷ್ಟು ಯಶಸ್ಸು ದಾಖಲಿಸದೆ ಎಂದು ಪ್ರಧಾನಿ ಹೇಳಿದರು. 

ಚರ್ಚೆಯಿಲ್ಲದೇ ವಂದನಾ ನಿರ್ಣಯ ಅಂಗೀಕಾರ: ಭಾರತದ ಸಂಸತ್ತಿನ ಇತಿಹಾಸದಲ್ಲಿಯೇ ಎರಡನೇ ಬಾರಿಗೆ ರಾಷ್ಟ್ರಪತಿಯವರ ಭಾಷಣದ ಮೇಲೆ ಯಾವುದೇ ಚರ್ಚೆ ಇಲ್ಲದೆ ವಂದನಾ ನಿರ್ಣಯವನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. 

‘ವಂದನಾ ನಿರ್ಣಯ ಮತ್ತು ಮಧ್ಯಂತರ ಬಜೆಟ್‌ಗೆ ಅಂಗೀಕಾರ ನೀಡಲು ರಾಜಸ್ಯಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಸಚಿವರ ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.

2004ರಲ್ಲಿ ಕೂಡ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯವನ್ನು ಚರ್ಚೆಯೇ ಇಲ್ಲದೇ ಮೊದಲ ಬಾರಿಗೆ ಅಂಗೀಕರಿಸಲಾಗಿತ್ತು.

1991 ಮತ್ತು 1996ರಲ್ಲಿ ವಂದನಾ ನಿರ್ಣಯ ಅಂಗೀಕಾರವೇ ಆಗಿರಲಿಲ್ಲ. ಆಗ ಪ್ರಧಾನಿಯಾಗಿದ್ದ ಚಂದ್ರಶೇಖರ್‌ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ವಂದನಾ ನಿರ್ಣಯವನ್ನು ಚರ್ಚೆಗೆ ಎತ್ತಿಕೊಳ್ಳುವ ಮೊದಲೇ ರಾಜೀನಾಮೆ ನೀಡಿದ್ದರು.

ಈಶಾನ್ಯದಲ್ಲಿ ಸಂಭ್ರಮಾಚರಣೆ

ಪೌರತ್ವ ತಿದ್ದುಪಡಿ ಮಸೂದೆಯು ಮಂಡನೆಯಾಗದೇ ರಾಜ್ಯಸಭೆಯು ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದ್ದು, ಈಶಾನ್ಯ ರಾಜ್ಯಗಳಲ್ಲಿ ಬುಧವಾರ ಸಂಭ್ರಮಕ್ಕೆ ಕಾರಣವಾಯಿತು. ಮಸೂದೆಯನ್ನು ವಿರೋಧಿಸಿ ದೊಡ್ಡ ಪ್ರಮಾಣದ ಪ್ರತಿಭಟನೆ
ಗಳು ನಡೆದಿದ್ದವು.

ಸುಗ್ರೀವಾಜ್ಞೆಯ ಅವಧಿ ಜೂನ್ 3ರಂದು ಮುಕ್ತಾಯಗೊಳ್ಳಲಿದ್ದು, ಅಷ್ಟರೊಳಗೆ ಮಸೂದೆ ಅಂಗೀಕಾರಗೊಂಡಿದ್ದರೆ ಅದು ಕಾಯ್ದೆಯಾಗಿ ಜಾರಿಗೆ ಬರುತ್ತಿತ್ತು. ಆದರೆ 16ನೇ ಲೋಕಸಭೆ ಕೊನೆಯ ಅಧಿವೇಶನ ಬುಧವಾರ ಕೊನೆಗೊಂಡಿದ್ದು, ರಾಜ್ಯಸಭೆಯನ್ನೂ ಅನಿರ್ದಿಷ್ಟಾವಧಿಗೆ ಮುಂದೂಡ
ಲಾಗಿದೆ. ‌

***

ಮಸೂದೆ ಮಂಡನೆಯಾಗದಿರುವುದು ಪ್ರಜಾಪ್ರಭುತ್ವ, ಅಸ್ಸಾಂ ಜನರಿಗೆ ದೊರೆದ ಜಯ

-ಸಂಭ್ರಮ ಆಚರಿಸಿದ ಸಂಘಟನೆಗಳು

ಇದು ಅಸ್ಸಾಂನ ಸೋಲು. 17 ವಿಧಾನಸಭಾ ಕ್ಷೇತ್ರಗಳು ಬಾಂಗ್ಲಾದೇಶಿ ಮುಸ್ಲಿಮರ ಪಾಲಾಗಲಿವೆ

-ಹಿಮಂತ ಬಿಸ್ವ ಶರ್ಮಾ, ಅಸ್ಸಾಂ ಹಣಕಾಸು ಸಚಿವ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !