ಸೋಮವಾರ, ಜುಲೈ 13, 2020
29 °C

ಲಾಕ್‍ಡೌನ್ ವಿಸ್ತರಣೆಯಿಂದ ವೈದ್ಯಕೀಯ ಬಿಕ್ಕಟ್ಟು ಉಂಟಾಗುತ್ತದೆ: ಆನಂದ್ ಮಹೀಂದ್ರಾ

ಪಿಟಿಐ  Updated:

ಅಕ್ಷರ ಗಾತ್ರ : | |

anand mahidra

ನವದೆಹಲಿ: ಲಾಕ್‌ಡೌನ್ ವಿಸ್ತರಣೆ ಮಾಡುವುದರಿಂದ ಆರ್ಥಿಕ ಸಮಸ್ಯೆ ಮಾತ್ರವಲ್ಲದೆ ವೈದ್ಯಕೀಯ ಬಿಕ್ಕಟ್ಟು ಉಂಟಾಗುತ್ತದೆ ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಹೇಳಿದ್ದಾರೆ.

ಅಧಿಕಾರದಲ್ಲಿರುವವರಿಗೆ ಈ ರೀತಿಯ ಆಯ್ಕೆಗಳು ಸುಲಭವಲ್ಲದೇ ಇದ್ದರೂ ಲಾಕ್‍ಡೌನ್ ವಿಸ್ತರಣೆ ಸಹಕಾರಿಯಾಗುವುದಿಲ್ಲ.
ನಾನು ಈ ಹಿಂದೆ ಟ್ವೀಟ್ ಮಾಡಿದಂತೆ ಲಾಕ್‍ಡೌನ್ ವಿಸ್ತರಣೆಯಿಂದ ಆರ್ಥಿಕ ಸಂಕಷ್ಟ ಮಾತ್ರ ಅಲ್ಲ ವೈದ್ಯಕೀಯ ಬಿಕ್ಕಟ್ಟು ಕೂಡಾ ತಲೆದೋರುತ್ತದೆ ಎಂದು ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ.

ಲಾಕ್‍ಡೌನ್‌‌ನಿಂದಾಗುವ ಮಾನಸಿಕ ಪರಿಣಾಮ ಮತ್ತು ಕೋವಿಡ್ -19 ರೋಗ ಇಲ್ಲದೇ ಇರುವ ರೋಗಿಗಳನ್ನ ಕಡೆಗಣಿಸುವುದರಿಂದ ಉಂಟಾಗುವ ಸಮಸ್ಯೆಯ ಬಗ್ಗೆ ಹೇಳಿರುವ ಲೇಖನವೊಂದನ್ನು ಉಲ್ಲೇಖಿಸಿ ಅವರು ಈ ರೀತಿ ಟ್ವೀಟಿಸಿದ್ದಾರೆ. 

49 ದಿನಗಳ ನಂತರ ಲಾಕ್‍ಡೌನ್ ವಿಸ್ತರಣೆ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ಮಹೀಂದ್ರಾ ಅವರು ಅಧಿಕಾರದಲ್ಲಿರುವವರಿಗೆ ಈ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭವೇನಲ್ಲ ಆದರೆ ಲಾಕ್‍ಡೌನ್ ವಿಸ್ತರಣೆಯಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದಿದ್ದಾರೆ.

ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹಾಗಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಮತ್ತು ಆಕ್ಸಿಜನ್ ಲೈನ್‌ಗಳ ಸಂಖ್ಯೆ ಹೆಚ್ಚು ಮಾಡಬೇಕಿದೆ. ಈ ಬಗ್ಗೆ ಸೇನೆಗೆ ಅಗಾಧ ಅರಿವು ಇದೆ ಎಂದು ಅವರು ಹೇಳಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು