ಲೋಕಸಭಾ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರ

7

ಲೋಕಸಭಾ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರ

Published:
Updated:

ಕೊಲ್ಕತ್ತ (ಪಶ್ಚಿಮ ಬಂಗಾಳ): ಲೋಕಸಭಾ ಮಾಜಿ ಸ್ಪೀಕರ್ ಹಾಗೂ ಸಿಪಿಐ(ಎಂ) ಮುಖಂಡ ಸೋಮನಾಥ ಚಟರ್ಜಿ(89) ಅವರ ಸ್ಥಿತಿ ಗಂಭೀರವಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಜೂನ್ ತಿಂಗಳ ಕೊನೆಯಲ್ಲಿ ಪಾರ್ಶ್ವವಾಯುಗೆ(hemorrhage stroke) ತುತ್ತಾಗಿದ್ದ ಚಟರ್ಜಿ ಅವರು ಆ.5ರವರೆಗೂ ಆಸ್ಪತ್ರೆಯಲ್ಲೇ ಇದ್ದರು. ಪುನಃ ಆ.10ಕ್ಕೆ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾದ ಪರಿಣಾಮ ಡಯಾಲಿಸಿಸ್‌ಗೆ ಒಳಪಡಿಸಲಾಗಿದ್ದು, ಶನಿವಾರದಿಂದ ವೆಂಟಿಲೇಟರ್‌ ಸಹಾಯದಿಂದ ಉಸಿರಾಡುತ್ತಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ 2004–2009ರವರೆಗೆ 14ನೇ ಲೋಕಸಭಾ ಸ್ಪೀಕರ್‌ ಆಗಿ ಕಾರ್ಯನಿರ್ವಹಿಸಿದರು. 1968ರಲ್ಲಿ ಸಿಪಿಐ(ಎಂ)ಗೆ ಸೇರಿದ ಅವರು 2008ರವರೆಗೆ ಪಕ್ಷದ ಮುಖಂಡರಾಗಿದ್ದರು. 10 ಬಾರಿ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿದ್ದರು.  

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !