ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುದುಚ್ಚೇರಿ ಸರ್ಕಾರದ ಕಾರ್ಯಗಳಲ್ಲಿ ಮಧ್ಯಪ್ರವೇಶ ಬೇಡ: ಕಿರಣ್ ಬೇಡಿಗೆ ತಾಕೀತು

Last Updated 30 ಏಪ್ರಿಲ್ 2019, 10:41 IST
ಅಕ್ಷರ ಗಾತ್ರ

ಪುದುಚ್ಚೇರಿ:ಪುದುಚ್ಚೇರಿ ಲೆ.ಗವರ್ನರ್ ಕಿರಣ್ ಬೇಡಿ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರದ ದೈನಂದಿನ ಕಾರ್ಯದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಮಂಗಳವಾರ ಆದೇಶ ನೀಡಿದೆ.

ಸರ್ಕಾರದ ದೈನಂದಿನ ಕಾರ್ಯ ಚಟುವಟಿಕೆಗಳ ಕಡತವನ್ನು ತರಿಸಿಕೊಳ್ಳುವುದು ಮತ್ತು ಅಧಿಕಾರಿಗಳಿಗೆ ಆದೇಶವನ್ನು ನೀಡುವ ಅಧಿಕಾರ ಕಿರಣ್ ಬೇಡಿಗೆ ಇಲ್ಲ ಎಂದುನ್ಯಾಯಾಲಯ ಹೇಳಿದೆ.

ಮೇ 2016ರಲ್ಲಿ ಕಿರಣ್ ಬೇಡಿ ಅಧಿಕಾರ ವಹಿಸಿದಂದಿನಿಂದಪುದುಚ್ಚೇರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿಯೊಂದಿಗೆ ದ್ವೇಷ ಸಾಧಿಸಿಕೊಂಡೇ ಬಂದಿದ್ದಾರೆ.

ಸಚಿವ ಸಂಪುಟವಿರುವಾಗಲೂ ಲೆ.ಗವರ್ನರ್ ಸರ್ಕಾರದ ದೈನಂದಿನ ಚಟುವಟಿಕೆಗಳಲ್ಲಿ ಅಧಿಕಾರ ಚಲಾಯಿಸುತ್ತಿರುವುದನ್ನು ಪ್ರಶ್ನಿಸಿ 2017ರಲ್ಲಿ ಪುದುಚ್ಚೇರಿಯ ಕಾಂಗ್ರೆಸ್ ಶಾಸಕ ಲಕ್ಷ್ಮಿನಾರಾಯಣನ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT