ಸಂಶೋಧಕಿ ಲೂಸಿ ವಿಲ್ಸ್ ಗೆ ಗೂಗಲ್ ಗೌರವ

ಶನಿವಾರ, ಮೇ 25, 2019
28 °C

ಸಂಶೋಧಕಿ ಲೂಸಿ ವಿಲ್ಸ್ ಗೆ ಗೂಗಲ್ ಗೌರವ

Published:
Updated:
Prajavani

ನವದೆಹಲಿ: ಇಂದು ರಕ್ತವಿಜ್ಞಾನ ಸಂಶೋಧಕಿ ಲೂಸಿ ವಿಲ್ಸ್ ಅವರ 131ನೇ ಜನ್ಮದಿನಾಚರಣೆ ಪ್ರಯುಕ್ತ ಗೂಗಲ್ ಸಂಸ್ಥೆ ತನ್ನ ಲೋಗೋದಲ್ಲಿ ಸಂಶೋಧನಾ ಉಪಕರಣಗಳನ್ನು ತರುವ ಮೂಲಕ ಗೌರವ ಸೂಚಿಸಿದೆ.

ಖ್ಯಾತ ಸಂಶೋಧಕಿ ಲೂಸಿ ವಿಲ್ಸ್ 1888ರಲ್ಲಿ ಇದೇ ದಿನ ಜನಿಸಿದರು. ಲೂಸಿ ವಿಲ್ಸ್ ತಮ್ಮ ವಿದ್ಯಾಭ್ಯಾಸವನ್ನು ಚೆಲ್ಟನ್ ಹ್ಯಾಂ ಶಾಲೆಯಲ್ಲಿ ಪಡೆದರು. ಈ ಶಾಲೆ ಕೇವಲ ವಿದ್ಯಾರ್ಥಿನಿಯರಿಗಾಗಿಯೇ ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ತರಬೇತಿ ನೀಡುವ ಮೊದಲ ವಸತಿ ಶಾಲೆಯಾಗಿದೆ.

ಈ ಶಾಲೆಯಲ್ಲಿ ಶಿಕ್ಷಣ ಪಡೆದ ಮೊದಲ ವಿದ್ಯಾರ್ಥಿನಿ ಲೂಸಿ ವಿಲ್ಸ್. 1911ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಸಸ್ಯಶಾಸ್ತ್ರ ಹಾಗೂ ಭೂಗರ್ಭಶಾಸ್ತ್ರದಲ್ಲಿ ಪದವಿ ಪಡೆದರು. ಬ್ರಿಟನ್‌‌ನ ಲಂಡನ್ ಸ್ಕೂಲ್ ಆಫ್ ಮೆಡಿಸನ್‌ನಿಂದ ಮೊದಲ ತರಬೇತಿ ಪಡೆದ ಮಹಿಳಾ ವೈದ್ಯೆ ಎಂಬ ಗೌರವಕ್ಕೆ ಲೂಸಿ ವಿಲ್ಸ್ ಪಾತ್ರರಾದರು.

ನಂತರ ಮುಂಬಯಿಗೆ ಪ್ರಯಾಣ ಬೆಳೆಸಿದ ಲೂಸಿ ವಿಲ್ಸ್ ಅವರು ಇಲ್ಲಿನ ಗಾರ್ಮೆಂಟ್ಸ್‌‌ಗಳಲ್ಲಿ ಗರ್ಭಿಣಿಯರಲ್ಲಿ ತೀವ್ರವಾಗಿ ಕಾಣಿಸಿಕೊಳ್ಳುತ್ತಿದ್ದ ಅನಿಮೀಯ ಕುರಿತು ಸಂಶೋಧನೆ ನಡೆಸಿದರು. ಈ ಸಮಯದಲ್ಲಿ ಮೊದಲು ಇಲಿ ಮತ್ತು ಕೋತಿಗಳ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾದ ಬಳಿಕ ಫೋಲಿಕ್ ಆಸಿಡ್ ನಿಂದಾಗಿ ಕೋತಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂತು. ಅಂದಿನಿಂದ ಮುಂಬಯಿಯ ಗಾರ್ಮೆಂಟ್ಸ್ ಕಂಪನಿಯ ಗರ್ಭಿಣಿಯರಿಗೆ ಫೋಲಿಕ್ ಆಸಿಡ್ ಬಳಸಿ ಚಿಕಿತ್ಸೆ ನೀಡಲು ಆರಂಭಿಸಿದಾಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂತು. ಅಂದಿನಿಂದ ಅನಿಮಿಯಾದಿಂದ ಬಳಲುವ ಗರ್ಭಿಣಿಯರಿಗೆ ಫೋಲಿಕ್ ಆಸಿಡ್ ನೀಡಲು ವೈದ್ಯರು ಶಿಫಾರಸು ಮಾಡುತ್ತಾರೆ. ಹೀಗೆ ಲೂಸಿ ವಿಲ್ಸ್ ಸಂಶೋಧನೆ ನಡೆಸಿ ಹಲವು ಔಷಧಗಳನ್ನು ಕಂಡು ಹಿಡಿದರು. 1964ರ ಏಪ್ರಿಲ್ 16ರಂದು ಮೃತಪಟ್ಟರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !