ಸೋಮವಾರ, ಮಾರ್ಚ್ 8, 2021
24 °C

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಲಿದೆ: ದಿಗ್ವಿಜಯ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ್: ಮಧ್ಯಪ್ರದೇಶಲ್ಲಿ ನೂರರಷ್ಟು ಸೀಟುಗಳ ಮತ ಎಣಿಕೆಯ ಮೊದಲ ಫಲಿತಾಂಶ ಬಂದಾಗ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.ಈ ಚುನಾವಣೆಯಲ್ಲಿ ಮಧ್ಯಪ್ರದೇಶದ ಚುನಾವಣೆ ಫಲಿತಾಂಶ ನಿರ್ಣಾಯಕ ಆಗಲಿದೆ. 5 ಕೋಟಿಯಷ್ಟು ಮತದಾರರಿರುವ ಮಧ್ಯಪ್ರದೇಶದಲ್ಲಿನ ವಿಧಾನಸಭಾ ಚುನಾವಣೆ ಫಲಿತಾಂಶ, ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ.
ಅಧಿಕಾರಕ್ಕೇರಲು ಶತಾಯಗತಾಯ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಒಂದೆಡೆಯಾದರೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಜನಪ್ರಿಯತೆಯನ್ನು ಬಳಸಿ ಬಿಜೆಪಿ ಅಧಿಕಾರ ಉಳಿಸುವ ಪ್ರಯತ್ನ ಮಾಡುತ್ತಿದೆ.

 15 ವರ್ಷದ ಬಿಜೆಪಿ ಅಧಿಕಾರದ ವಿರುದ್ಧ ರೈತರು, ದಲಿತರು, ಹಿಂದುಳಿದ ವರ್ಗದವರು ಮತ್ತು ಸಣ್ಣ ಉದ್ಯಮದಾರರು ಒಂದಾಗಿ ಆ ಶಕ್ತಿ ಮತವಾಗಿ ಬದಲಾದರೆ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂಬುದು ಕಾಂಗ್ರೆಸ್ ಕನಸು. ಆದರೆ ಚೌಹಾಣ್ ಜನಪ್ರಿಯತೆ ಮತ್ತು ಜನರಿಗೆ ಬಿಜೆಪಿ ಮೇಲಿರುವ ವಿಶ್ವಾಸಕ್ಕೆ ಧಕ್ಕೆಯಾಗಿಲ್ಲ ಎಂಬ ನಂಬಿಕೆಯಿಂದಿದೆ ಬಿಜೆಪಿ.

ಈಗಲೇ ಎಲ್ಲವನ್ನೂ ನಿರ್ಧರಿಸುವುದು ಕಷ್ಟ,  ಮಧ್ಯಾಹ್ನ 12 ಗಂಟೆ ನಂತರವೇ ಈ ಬಗ್ಗೆ ಹೇಳಲಾಗುವುದು. ಪೋಸ್ಟಲ್ ಮತದಲ್ಲಿನ ಮುನ್ನಡೆ ಮಾತ್ರ ಈಗ ಬಂದಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂಬ ನಂಬಿಕೆ ಇದೆ ಎಂದು ಕಾಂಗ್ರೆಸ್ ನೇತಾರ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು