ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಂತ್ರಣ: ‘ಮಹಾ’ ಕೃಷಿ ವಿ.ವಿ ಸಲಹೆ

ಮಿಡತೆ ಹಿಂಡುಗಳ ದಾಳಿಯಿಂದ ಬೆಳೆ ನಾಶ
Last Updated 29 ಮೇ 2020, 18:36 IST
ಅಕ್ಷರ ಗಾತ್ರ

ಔರಂಗಾಬಾದ್‌: ಮೊಟ್ಟೆಗಳನ್ನು ನಾಶಪಡಿಸುವುದು, ಬೆಳೆಗಳ ಮೇಲೆ ಬೇವಿನ ಎಣ್ಣೆ ಸಿಂಪಡಿಸುವಂತಹ ಕ್ರಮಗಳ ಮೂಲಕ ಮಿಡತೆಗಳ ಉಪಟಳಕ್ಕೆ ಕೊನೆ ಹಾಡಬಹುದು ಎಂದು ಮಹಾರಾಷ್ಟ್ರದ ಪರ್ಭಣಿಯ ವಸಂತರಾವ್ ನಾಯ್ಕ್ ಕೃಷಿ ವಿಶ್ವವಿದ್ಯಾಲಯದ ಸಲಹೆ ನೀಡಿದೆ.

ಈ ಸಂಬಂಧ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ತಜ್ಞರು ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

‘ತೇವಾಂಶ ಇದ್ದು, ಮರಳಿನಿಂದ ಕೂಡಿದ ಪ್ರದೇಶಗಳಲ್ಲಿ ಹೆಣ್ಣು ಮಿಡತೆಗಳು 50–100 ಮೊಟ್ಟೆಗಳನ್ನು ಇಡುತ್ತವೆ. ವಾತಾವರಣದ ಆಧಾರದ ಮೇಲೆ ಈ ಮೊಟ್ಟೆಗಳು ಮರಿಯಾಗಲು 2 ರಿಂದ 4 ವಾರ ಬೇಕಾಗುತ್ತದೆ. ಮೊಟ್ಟೆಯಿಂದ ಹೊರಬರುವ ಮರಿಗಳು (ಲಾರ್ವಾ) ಆ ಕ್ಷಣವೇ ಹಾರಾಡುವ ಶಕ್ತಿಯನ್ನು ಹೊಂದಿರುವುದಿಲ್ಲ. ಹೀಗಾಗಿ ಮೊಟ್ಟೆಗಳನ್ನು ಗುಂಪುಗುಂಪಾಗಿ ನಾಶ ಮಾಡಬೇಕು‘ ಎಂದು ಕೀಟಶಾಸ್ತ್ರಜ್ಞರು ಸಲಹೆ ನೀಡಿದ್ದಾರೆ.

‘ಹೊಲಗಳಲ್ಲಿ 60 ಸೆಂ.ಮೀ. ಅಗಲ ಹಾಗೂ 75 ಸೆಂ. ಮೀ. ಆಳದ ತಗ್ಗುಗಳನ್ನು ತೋಡಬೇಕು. ಚಿಕ್ಕ ಮಿಡತೆಗಳು ಈ ತಗ್ಗುಗಳಲ್ಲಿ ಬೀಳುತ್ತವೆ. ನಂತರ ಅವುಗಳನ್ನು ನಾಶಪಡಿಸಬೇಕು‘ ಎಂದೂ ಸಲಹೆ ನೀಡಿದ್ದಾರೆ.

‘ಮಿಡತೆಗಳು ಹಿಂಡುಹಿಂಡಾಗಿ ದಾಳಿ ಮಾಡುತ್ತವೆ. ಒಂದು ಚದರ ಕಿ.ಮೀ. ವಿಸ್ತೀರ್ಣದಲ್ಲಿನ ಮಿಡತೆಗಳ ಒಟ್ಟು ತೂಕ 3 ಸಾವಿರ ಕ್ವಿಂಟಲ್‌ ಇರುತ್ತದೆ. ಇವುಗಳು ರಾತ್ರಿ ಹೊತ್ತಿನಲ್ಲಿ ಹಾರಾಡದೇ, ವಿಶ್ರಾಂತಿಯ ಮೊರೆ ಹೋಗುತ್ತವೆ. ಹೊಗೆ ಹಾಕುವ ಮೂಲಕ ಈ ವೇಳೆಯಲ್ಲಿ ಅವುಗಳನ್ನು ನಾಶಪಡಿಸಲು ಸಾಧ್ಯ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT