ಶುಕ್ರವಾರ, ಮೇ 29, 2020
27 °C

ಉದ್ಧವ್‌ ಠಾಕ್ರೆ ಸೇರಿ 9 ಮಂದಿ ಪ್ರಮಾಣ ವಚನ ಸ್ವೀಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸೇರಿದಂತೆ 9 ಮಂದಿ ಸೋಮವಾರ ‍ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿ ರಾಮರಾಜೆ ನಿಂಬಾಳ್ಕರ್ ಪ್ರಮಾಣ ವಚನವನ್ನು ಬೋಧಿಸಿದರು. 

ಶಿವಸೇನೆಯಿಂದ ಉದ್ಧವ್‌ ಠಾಕ್ರೆ, ವಿಧಾನ ಪರಿಷತ್ತಿನ ಉಪ ಸಭಾಪತಿ ನೀಲಂ ಗುರ್ಹೆ, ಬಿಜೆಪಿಯಿಂದ ರಂಜಿತ್‌ಸಿಂಹ ಮೋಹಿತೆ ಪಾಟೀಲ್‌, ಗೋಪಿಚಂದ್‌ ಪಡಾಲ್ಕರ್‌, ಪ್ರವೀಣ್‌ ದಾಟ್ಕೆ ಮತ್ತು ರಮೇಶ್‌ ಕರಾಡ್‌, ಎನ್‌ಸಿಪಿಯಿಂದ ಶಶಿಕಾಂತ್‌ ಶಿಂಧೆ, ಅಮೂಲ ಮಿಟ್ಕಾರಿ ಮತ್ತು ಕಾಂಗ್ರೆಸ್‌ ನಾಯಕ ರಾಜೇಶ್‌ ರಾಠೋಡ್‌‌  ಪ್ರಮಾಣ ವಚನ ಸ್ವೀಕರಿಸಿದರು.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು