ಭಾನುವಾರ, ಜೂಲೈ 12, 2020
22 °C

ಮಹಾರಾಷ್ಟ್ರ; ವಿಶ್ವದ ಅತಿ ದೊಡ್ಡ ಪ್ಲಾಸ್ಮಾ ಚಿಕಿತ್ಸೆ ಯೋಜನೆಗೆ ಚಾಲನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಗಂಭೀರ ಪರಿಸ್ಥಿತಿಯಲ್ಲಿರುವ ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಬೃಹತ್‌ ಪ್ಲಾಸ್ಮಾ ಯೋಜನೆಗೆ ಮಹಾರಾಷ್ಟ್ರ ಸರ್ಕಾರ ಸೋಮವಾರ ಚಾಲನೆ ನೀಡಿದೆ.

ಇದು ಜಗತ್ತಿನಲ್ಲೇ ಚಿಕಿತ್ಸೆ ಜತೆಗೆ ಪ್ರಯೋಗ ನಡೆಸುವ ಅತಿ ದೊಡ್ಡದಾದ ಪ್ಲಾಸ್ಮಾ ಯೋಜನೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಸೋಂಕಿನಿಂದ ಗುಣಮುಖರಾದ ಜನರ ರಕ್ತದಿಂದ ಪ್ಲಾಸ್ಮಾ ಪಡೆದುಕೊಂಡು ಸದ್ಯ ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಸೇರಿಸುವ ಪ್ರಕ್ರಿಯೆ ಇದಾಗಿದೆ. ಸಕ್ರಿಯವಲ್ಲದ ದೇಹನಿರೋಧಕ ಚಿಕಿತ್ಸೆ ಎಂದು ಸಹ ಇದನ್ನು ಕರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಯೋಜನೆಗೆ ‘ಪ್ಲಾಟಿನಾ’ ಎಂದು ಕರೆಯಲಾಗಿದೆ. ಈ ಯೋಜನೆ ಮೂಲಕ ಗಂಭೀರ ಸ್ಥಿತಿಯಲ್ಲಿರುವ ಸುಮಾರು 500 ಕೋವಿಡ್‌–19 ರೋಗಿಗಳ ಜೀವ ಉಳಿಸುವ ಉದ್ದೇಶವಿದೆ. 21 ವೈದ್ಯಕೀಯ ಕಾಲೇಜುಗಳಲ್ಲಿ ಈ ಬಗ್ಗೆ ಪ್ರಯೋಗ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಂಭೀರ ಸ್ಥಿತಿಯಲ್ಲಿರುವ ಎಲ್ಲ ರೋಗಿಗಳು ಉಚಿತವಾಗಿ 200 ಮಿ.ಲೀ. ಪ್ಲಾಸ್ಮಾ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು