ಕಾಶ್ಮೀರ: ಗುಂಡಿನ ಚಕಮಕಿಯಲ್ಲಿ ಮೇಜರ್‌, 3 ಯೋಧರು ಸಾವು, ಇಬ್ಬರು ಉಗ್ರರ ಹತ್ಯೆ

7

ಕಾಶ್ಮೀರ: ಗುಂಡಿನ ಚಕಮಕಿಯಲ್ಲಿ ಮೇಜರ್‌, 3 ಯೋಧರು ಸಾವು, ಇಬ್ಬರು ಉಗ್ರರ ಹತ್ಯೆ

Published:
Updated:

ಶ್ರೀನಗರ: ಉತ್ತರ ಕಾಶ್ಮೀರದ ಗುರೇಝ್‌ ವಲಯದಲ್ಲಿ ನುಸುಳುಕೋರು ಮತ್ತು ಭದ್ರತಾ ಪಡೆ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಮೇಜರ್‌ ಮತ್ತು ಮೂವರು ಯೋಧರು ಮೃತಪಟ್ಟಿದ್ದಾರೆ. ಇಬ್ಬರು ಉಗ್ರರು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಡಿಪೊರ ಜಿಲ್ಲೆಯ ಗುರೇಝ್‌ ವಲಯದ ಗೋವಿಂದ ನಲ್ಲಾದಲ್ಲಿ ಗಸ್ತಿನಲ್ಲಿದ್ದ ಭದ್ರತಾಪಡೆ ಮತ್ತು ಒಳನುಸುಳುಕೋರರ ಮಧ್ಯೆ ಗುಂಡಿನ ಕಾಳಗ ನಡೆಸಿದೆ. 

ಮೇಜರ್‌ ಕೆ.ಪಿ. ರಾಣೆ, ಯೋಧರಾದ ಜೇಮಿ ಸಿಂಗ್‌ ಮತ್ತು ವಿಕ್ರಮ್‌ಜಿತ್‌ ಹಾಗೂ ಮಂದೀಪ್‌ ಮೃತಪಟ್ಟಿದ್ದಾರೆ.

ಹತ್ಯೆಯಾಗಿರುವ ಇಬ್ಬರು ಉಗ್ರರ ದೇಹಗಳು ಕಾಣಿಸಿದ್ದು, ಇನ್ನಿಬ್ಬರು ಉಗ್ರರು ಹತ್ಯೆಯಾಗಿರಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಭದ್ರತಾಪಡೆಗಳು ಎನ್‌ಕೌಟರ್‌ ನಡೆದ ಸ್ಥಳಕ್ಕೆ ತೆರಳಿವೆ. 

ಎಂಟು ಗುಂಪುಗಳು ದೇಶದೊಳಕ್ಕೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿವೆ ಎಂದು ಪ್ರಾಥಮಿಕ ವರದಿ ತಿಳಿಸಿವೆ. ಅವರಲ್ಲಿ ನಾಲ್ವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹಿಂದಿರುಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

* ಇದನ್ನೂ ಓದಿ...

ಈ ವರ್ಷ ಜಮ್ಮು ಮತ್ತು ಕಾಶ್ಮೀರಕ್ಕೆ 69 ಉಗ್ರರು ಒಳನುಸುಳಿದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !