ಮಂಗಳವಾರ, ಜೂಲೈ 7, 2020
22 °C

ಅಸಂಘಟಿತ, ವಲಸೆ ಕಾರ್ಮಿಕರಿಗೆ ₹10 ಸಾವಿರ ನೀಡುವಂತೆ ಮಮತಾ ಬ್ಯಾನರ್ಜಿ ಆಗ್ರಹ

ಎಎನ್ಐ Updated:

ಅಕ್ಷರ ಗಾತ್ರ : | |

ಪಶ್ಚಿಮ ಬಂಗಾಳ: ಕೊರೊನಾದಿಂದಾಗಿ ಸಂಕಷ್ಟಕ್ಕೆ ಈಡಾಗಿರುವ ಅಸಂಘಟಿತ ಹಾಗೂ ವಲಸೆ ಕಾರ್ಮಿಕರ ಖಾತೆಗಳಿಗೆ ₹10ಸಾವಿರ ಹಣ ಹಾಕುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊರೊನಾ ಸೋಂಕು ಪಿಡುಗು ಊಹೆಗೂ ನಿಲುಕದಂತಹ ಸಂಕಷ್ಟವನ್ನು ಸೃಷ್ಟಿಸಿದ್ದು, ಇದರಿಂದಾಗಿ ಅಸಂಘಟಿತ ವಲಯ ಹಾಗೂ ವಲಸೆ ಕಾರ್ಮಿಕರು ಹಿಂದೆಂದೂ ಕಂಡಿರದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಇದರಿಂದಾಗಿ ಜನರನ್ನು ಸಂಕಷ್ಟದಿಂದ ಸದ್ಯಕ್ಕೆ ಪಾರು ಮಾಡಲು ಪ್ರಧಾನಿಯವರ ಬಳಿ ಇರುವ ಪಿಎಂ ಕೇರ್ಸ್ (PM-CARES)ನಿಂದ ಹಣ ಹಾಕುವಂತೆ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

ಬಳ್ಳಾರಿ: ಕಳಪೆ ಕಾಮಗಾರಿ, ಇಂಗು ಗುಂಡಿ ಕುಸಿತ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು