ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ ದೇಗುಲ ಪ್ರವೇಶಿಸುವ ದಿಟ್ಟತನ ಮೆರೆದ ಮಹಿಳೆಯರು ಯಾರು?

Last Updated 19 ಅಕ್ಟೋಬರ್ 2018, 16:15 IST
ಅಕ್ಷರ ಗಾತ್ರ

ತಿರುವನಂತಪುರಂ: ಎಲ್ಲಾ ವಯೋಮಾನ ಮಹಿಳೆಯರು ಶಬರಿಮಲೆಯ ಅಯ್ಯಪ್ಪನ ದೇಗುಲಕ್ಕೆ ಹೋಗಬಹುದು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡುತ್ತಿದ್ದಂತೆ ಸಾಕಷ್ಟು ವಿರೋಧಗಳು ವ್ಯಕ್ತವಾದವು. ಇದೆಲ್ಲವನ್ನೂ ಮೀರಿಇಬ್ಬರು ದಿಟ್ಟ ಮಹಿಳೆಯರು ಅತ್ತ ಹೆಜ್ಜೆ ಹಾಕಿಯೇ ಬಿಟ್ಟರು.

ಇಷ್ಟೆಲ್ಲ ಮಾಡಿದ ಆ ಮಹಿಳೆಯರು ಯಾರಪ್ಪ ಅಂತೀರಾ? ಒಬ್ಬರು ಹೈದರಾಬಾದಿನಕವಿತಾ ಜಕ್ಕಳ.ಮತ್ತೊಬ್ಬರು ಕೊಚ್ಚಿಯ ರೆಹನಾ ಫಾತೀಮಾ. ಈ ಇಬ್ಬರು ಮಹಿಳೆಯರ ಸಾಹಸವನ್ನು ಕೆಲವರು ಮೆಚ್ಚಿಕೊಂಡರೆ, ಇನ್ನೂ ಕೆಲವರು ಟೀಕಿಸುತ್ತಿದ್ದಾರೆ.

ಕವಿತಾ ಜಕ್ಕಳ ಯಾರು?
ಕವಿತಾ ಹೈದರಾಬಾದಿನ ದೃಶ್ಯಮಾಧ್ಯಮವೊಂದರಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಎಇಸಿಟಿ ಹಾಗೂ ದೀಪ್ತಿ ಜೂನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಕವಿತಾ 10ಟಿವಿಯಲ್ಲಿ ನಿರೂಪಕಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಈಗ ಅವರು ತೆಲುಗಿನ ಮೋಜೋ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರೇನು ಅಯ್ಯಪ್ಪನ ಭಕ್ತರಲ್ಲ. ಎಲ್ಲಾ ಮಹಿಳೆಯರು ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಮಾಡಬಹುದು ಎಂದಾದ ಮೇಲೆ ಅಲ್ಲಿಗೆ ಹೋಗಿ ವರದಿ ಮಾಡುವ ಹುಮ್ಮಸ್ಸಿನಿಂದ ಅವರುದೇಗುವ ಪ್ರವೇಶಕ್ಕೆ ಮುಂದಾಗಿದ್ದಾರೆಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಕವಿತಾ ಅವರ ಕರ್ತವ್ಯ ನಿಷ್ಠೆಯಬಗ್ಗೆ ಮಾತನಾಡಿರುವ ಅವರ ಪತಿ ವಿಪ್ಲವ್ ಕುಮಾರ್, ದೇವಾಲಯ ಪ್ರವೇಶಿಸುವ ಅವರ ಪ್ರಯತ್ನವನ್ನು ಮೆಚ್ಚಿದ್ದಾರೆ. ‘ಅವಳು ಧೀರೆ. ತನ್ನ ಗುರಿಯನ್ನು ತಲುಪುತ್ತಾಳೆ’ ಎಂದು ಬೆಂಗಳೂರು ಮಿರರ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ರೆಹನಾ ಫಾತೀಮಾ ಯಾರು?

ನಿಯಮಗಳನ್ನು ಮುರಿಯಬೇಕು ಎಂದು ಸಾರಿ ಹೇಳುವರೆಹನಾ ಫಾತೀಮಾ,ಹೇಳಿದಂತೆಯೇ ಬದುಕುತ್ತಿದ್ದಾರೆ. ಸಾಂಪ್ರದಾಯಿಕ ಮುಸ್ಲಿಂ ಕುಟುಂಬದವದಲ್ಲಿ ಹುಟ್ಟಿದ ಇವರು ಸದ್ಯ ಬಿಎಸ್‌ಎನ್‌ಎಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಕೋಯಿಕ್ಕೊಡ್‌ನಫಾರೂಕ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರು ಭಾಷಣ ಮಾಡುವಾಗ, ‘ಯುವತಿಯರ ಸ್ತನ ಕಲ್ಲಂಗಡಿ ಹಣ್ಣಿನ ರೀತಿ ಇರುತ್ತದೆ’ ಎಂದು ಹೇಳಿದ್ದನ್ನು ಖಂಡಿಸಿಟಾಪ್‌ಲೆಸ್ ಪ್ರತಿಭಟನೆ ಕೈಗೊಂಡಿದ್ದರು. ಅಲ್ಲದೇ ನಾಲ್ಕು ವರ್ಷಗಳ ಹಿಂದೆ ಕೊಚ್ಚಿಯಲ್ಲಿ ಕಿಸ್ ಆಫ್ ಲವ್ ಪ್ರತಿಭಟನೆಯಲ್ಲಿ ಭಾಗಿವಹಿಸಿದ್ದರು. ಏಕಾ ಎಂಬ ಕಲಾತ್ಮಕ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಜೊತೆಗೆ ಹುಲಿ ವೇಷ ಧರಿಸಿ ಪುರುಷರ ಜೊತೆ ಹೆಜ್ಜೆಹಾಕಿದ್ದಾರೆ ರೆಹನಾ.

ಮಹಿಳಾ ಸಮಾನತೆಯ ದನಿ ಎತ್ತಿರುವ ಆಕೆ, ಪುರುಷ ಮತ್ತು ಮಹಿಳೆಯರನ್ನು ಭೇದ ಭಾವದಲ್ಲಿ ನಿಲ್ಲಿಸಿ ಆಕೆಯ ದೇಹಕ್ಕೆ ನಿಯಮಗಳ ಸರಪಳಿ ಜಡೆದಿರುವ ಬಗ್ಗೆ ಪ್ರಶ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT