ಗಣಿಗಾರಿಕೆ: ‘ಸುಪ್ರೀಂ’ ತಡೆಯಾಜ್ಞೆ

7
ಅಕ್ರಮ ಗಣಿಗಾರಿಕೆ ₹ 215 ಕೋಟಿ ಪಾವತಿಗೆ ಸರ್ಕಾರದ ನಿರ್ದೇಶನ

ಗಣಿಗಾರಿಕೆ: ‘ಸುಪ್ರೀಂ’ ತಡೆಯಾಜ್ಞೆ

Published:
Updated:

ನವದೆಹಲಿ: ‘ಸಿ’ ಕೆಟಗರಿ ಗಣಿಯಿಂದ ಅಕ್ರಮವಾಗಿ ಅದಿರು ತೆಗೆದಿದ್ದಕ್ಕೆ ಬದಲಾಗಿ ₹ 215.75 ಕೋಟಿ ಸಂದಾಯ ಮಾಡುವಂತೆ ರಾಜ್ಯ ಸರ್ಕಾರವು ಗಣಿ ಮಾಲೀಕರೊಬ್ಬರಿಗೆ ನಿರ್ದೇಶನ ನೀಡಿದ್ದನ್ನು ರದ್ದುಪಡಿಸಿ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ.

ರಾಜ್ಯ ಸರ್ಕಾರದ ವಿಶೇಷ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮದನ್‌ ಬಿ.ಲೋಕೂರ್‌ ನೇತೃತ್ವದ ತ್ರಿಸದಸ್ಯ ಪೀಠ, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ದೀಪಚಂದ್‌ ಕಿಶನ್‌ಲಾಲ್‌ ಗಣಿ ಕಂಪೆನಿಗೆ ನೋಟಿಸ್‌ ಜಾರಿ ಮಾಡಿದ್ದು, ರಾಜ್ಯ ಹೈಕೋರ್ಟ್‌ 2017ರ ಆಗಸ್ಟ್‌ 23ರಂದು ನೀಡಿದ್ದ ಆದೇಶವನ್ನು ಅಮಾನತಿನಲ್ಲಿರಿಸಿದೆ.

‘ಹೈಕೋರ್ಟ್‌ ಆದೇಶದಿಂದಾಗಿ ರಾಜ್ಯ ಸರ್ಕಾರಕ್ಕೆ ಭಾರಿ ನಷ್ಟ ಉಂಟಾಗಲಿದೆ’ ಎಂದು ಹೆಚ್ಚುವರಿ ಅದ್ವೋಕೇಟ್‌ ಜನರಲ್‌ ದೇವದತ್ತ ಕಾಮತ್‌ ನ್ಯಾಯಪೀಠಕ್ಕೆ ತಿಳಿಸಿದರು.

ಈ ಗಣಿಯಲ್ಲಿ 2003ರಿಂದ 2008ರ ಅವಧಿಯಲ್ಲಿ ಅಕ್ರಮವಾಗಿ ಅದಿರು ಉತ್ಪಾದನೆ ಮಾಡಿದ್ದಾಗಿ 2011ರಲ್ಲಿ ಲೋಕಾಯುಕ್ತ ಸಲ್ಲಿಸಿದ್ದ ವರದಿಯನ್ನು ಆಧರಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಕಂಪೆನಿಗೆ ₹ 215.75 ಕೋಟಿ ಪಾವತಿಸುವಂತೆ ಸೂಚಿಸಿದ್ದರು. ಅಲ್ಲದೆ, 20 ವರ್ಷಗಳ ಅವಧಿಗೆ ನೀಡಲಾಗಿದ್ದ ಗಣಿ ಗುತ್ತಿಗೆಯು 1994ರಲ್ಲೇ ರದ್ದಾಗಿದ್ದರೂ ನಂತರದ ಅವಧಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗಿದೆ ಎಂದು ತಿಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !