ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೆ ಉಳಿಸಿ ಎಂದು ದನಿಎತ್ತಿದ ಸಂತ ಗೋಪಾಲ್ ದಾಸ್ ನಾಪತ್ತೆ

Last Updated 17 ಜನವರಿ 2019, 10:44 IST
ಅಕ್ಷರ ಗಾತ್ರ

ನವದೆಹಲಿ:ಗಂಗೆಯೂ ಶುದ್ಧವಾಗುತ್ತಿಲ್ಲ, ಗಂಗೆಯನ್ನು ಶುಚಿಯಾಗಿಡಿ ಎಂದು ಒತ್ತಾಯಿಸಿದ ಹೋರಾಟಗಾರರ ಮಾತೂ ಕೇಳಿಸುತ್ತಿಲ್ಲ...

ಗಂಗಾ ಶುದ್ಧೀಕರಣ ಆಗಲೇಬೇಕು ಎಂದು ಒತ್ತಾಯಿಸುವ ಹೋರಾಟ ಪ್ರಬಲವಾಗಿರುವಉತ್ತರಖಂಡದ ಹೃಷೀಕೇಶದಲ್ಲಿ ಈ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಮಾತಿಗೆ ಪುಷ್ಟಿ ಕೊಡುವಂತೆ ಗಂಗೆಯನ್ನು ಉಳಿಸಿ ಆಂದೋಲನದ ಸಂತ ಗೋಪಾಲ್ ದಾಸ್ ಮತ್ತು ಅವರ ಸಹಚರರು ಇದೀಗ ನಾಪತ್ತೆಯಾಗಿದ್ದಾರೆ.

‘ಗಂಗೆಯ ಮುಕ್ತ ಹರಿವಿಗೆ ತಡೆ ಇರಬಾರದು, ಗಂಗೆಯ ಮಾಲಿನ್ಯಕ್ಕೆ ಕಡಿವಾಣ ಹಾಕಬೇಕು’ ಎಂದುಒತ್ತಾಯಿಸಿಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಖ್ಯಾತ ಪರಿಸರ ಹೋರಾಟಗಾರ ಜಿ.ಡಿ.ಅಗರ್ವಾಲ್ ಹುತಾತ್ಮರಾದ ಕೆಲವೇ ತಿಂಗಳುಗಳಲ್ಲಿಮತ್ತೋರ್ವ ಸತ್ಯಾಗ್ರಹಿ ಸಂತ ಗೋಪಾಲ್ ದಾಸ್ ನಾಪತ್ತೆಯಾಗಿದ್ದಾರೆ.

ಹರಿದ್ವಾರದ ‘ಮೈತ್ರಿಸದನ’ದಲ್ಲಿ 100 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ದಾಸ್, ಡೆಹ್ರಾಡೂನ್‌ನ ಡೂನ್‌ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೊನೆಯ ಬಾರಿಗೆ ಜನರ ಕಣ್ಣಿಗೆ ಬಿದ್ದಿದ್ದರು. ಚಿಕಿತ್ಸೆಗೆಂದು ಅವರನ್ನು ಡಿ.6ರಂದು ಹೃಷೀಕೇಶದಿಂದ ಡೆಹ್ರಾಡೂನ್‌ಗೆ ಕೊಂಡೊಯ್ಯಲಾಗಿತ್ತು. ದಾಸ್ ನಾಪತ್ತೆಯಾದ ಕೆಲವೇ ದಿನಗಳಲ್ಲಿ ಅವರ ಇನ್ನಿಬ್ಬರು ಸಹಚರರೂ ನಾಪತ್ತೆಯಾಗಿರುವುದುಗಂಗಾ ಸಂರಕ್ಷಣೆ ಯೋಜನೆಗಳ ಹಿಂದಿರುವ ರಾಜಕಾರಣ ಮತ್ತು ಕಂಟ್ರಾಕ್ಟ್ ಮಾಫಿಯಾಗಳ ಬಗ್ಗೆ ಜನರಲ್ಲಿ ಶಂಕೆ ಹುಟ್ಟುಹಾಕಿದೆ.

ಉತ್ತರಖಂಡದಲ್ಲಿ ಗಂಗಾ ನದಿಯ ಸಂರಕ್ಷಣೆಗೆ ಆಗ್ರಹಿಸಿ ಸಾಧುಗಳು ನಡೆಸುತ್ತಿರುವ ಹೋರಾಟದಲ್ಲಿಯೂ ಇದೀಗ ರಾಜಕಾರಣ ಪ್ರವೇಶವಾಗಿರುವ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಹೋರಾಟ ಮುಂಚೂಣಿಯಲ್ಲಿದ್ದ ನಾಯಕರಾದಜಿ.ಡಿ.ಅಗರ್ವಾಲ್ ಸ್ವತಃ ಇಂಥ ಆರೋಪ ಮಾಡಿದ್ದರು. ಅಗರ್ವಾಲ್ ಮೃತಪಟ್ಟ ನಂತರ ಗಂಗಾ ಸಂರಕ್ಷಣೆ ಹೋರಾಟ ತುಸು ಕಳಾಹೀನವಾಗಿತ್ತು. ಈ ಹಂತದಲ್ಲಿ ಪ್ರವರ್ಧಮಾನಕ್ಕೆ ಬಂದವರು ಸಂತ ಗೋಪಾಲ ದಾಸ್.

ಗಂಗೆಯ ಜನಬೆಂಬಲ ಮತ್ತು ಅನುಯಾಯಿಗಳ ಉತ್ತರಖಂಡ ಸರ್ಕಾರವು ತನ್ನ ದೃಷ್ಟಿಯನ್ನು ದಾಸ್ ಅವರತ್ತ ಹರಿಸಿತ್ತು. ಅವರನ್ನು ಹೃಷೀಕೇಶ ಮತ್ತು ಡೆಹ್ರಾಡೂನ್‌ನ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಓಡಾಡಿಸಲಾಯಿತು.

ಹೃಷೀಕೇಶದಲ್ಲಿ ಆಕ್ರೋಶ

ದಾಸ್ ಅವರನ್ನು ಒತ್ತಾಯದಿಂದ ಹೃಷೀಕೇಶದ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು ಎಂಬ ಮಾತುಗಳು ಇದೀಗ ಕೇಳಿ ಬರುತ್ತಿವೆ. ಏಮ್ಸ್‌ನ ಓರ್ವ ಕಿರಿಯ ವೈದ್ಯರೊಂದಿಗೆ ಸಂಘರ್ಷಕ್ಕೆ ಇಳಿದಿದ್ದರು. ‘ದಾಸ್‌ರಿಂದ ತೊಂದರೆಯಾಗುತ್ತಿದೆ’ ಎಂದು ಆ ವೈದ್ಯ ಆರೋಪವನ್ನೂ ಮಾಡಿದ್ದರು.

ಮಗನ ಸುರಕ್ಷತೆ ವಿಚಾರದಲ್ಲಿ ಆತಂಕಗೊಂಡ ತಾಯಿ, ಮನೆಗೆ ವಾಪಸ್ ಕಳಿಸಿಕೊಡಿ ಎಂದು ಕೋರಿದರು. ಹೃಷೀಕೇಶದ ದತ್ತಾತ್ರೇಯ ಘಾಟ್‌ನಲ್ಲಿ ಉಪವಾಸ ಸತ್ಯಾಗ್ರಹವನ್ನೂ ಆರಂಭಿಸಿದರು. ಆದರೂ ದಾಸ್ ಕುರಿತು ಯಾವುದೇ ಮಾಹಿತಿ ಸಿಗಲಿಲ್ಲ.

ದಾಸ್ ಅವರ ತಂದೆ ಮಗನ ಬಗ್ಗೆ ಮಾಹಿತಿ ಕೊಡಿ ಏಮ್ಸ್‌ ಆಡಳಿತ ಮಂಡಳಿಯನ್ನು ಒತ್ತಾಯಿಸಿದಾಗ, ‘ದಾಸ್ ಎಲ್ಲಿದ್ದಾರೋ ನಮಗೆ ಗೊತ್ತಿಲ್ಲ’ ಎಂದು ಅಲ್ಲಿನ ಸಿಬ್ಬಂದಿ ಕೈಚೆಲ್ಲಿದರು. ರಾಜಕೀಯ ಒತ್ತಡಕ್ಕೆ ಮಣಿದ ಏಮ್ಸ್‌ ನಿರ್ದೇಶಕ ರಣದೀಪ್ ಗುಲ್ನೇರಿಯಾ, ದಾಸ್ ಅವರನ್ನು ಅವರ ವಿನಂತಿಯ ಮೇರೆಗೆ ಡಿಸ್‌ಚಾರ್ಜ್ ಮಾಡಲಾಯಿತು ಎಂದು ದಾಸ್ ಕುಟುಂಬಕ್ಕೆ ತಿಳಿಸಿಬಿಟ್ಟರು.

ಹಲವು ತಿಂಗಳುಗಳಿಂದ ಉಪವಾಸ ಮಾಡುತ್ತಿದ್ದ ವ್ಯಕ್ತಿ ಹೇಗೆ ಆರೋಗ್ಯವಾಗಿರಲು ಸಾಧ್ಯ ಮತ್ತು ಅವರನ್ನು ಆಸ್ಪತ್ರೆ ಹೇಗೆ ಡಿಸ್‌ಚಾರ್ಜ್ ಮಾಡಿತು? ಗುಲ್ನೇರಿಯಾ ಒಬ್ಬರಿಗೆ ಮಾತ್ರ ಉತ್ತರ ಗೊತ್ತಿರಲು ಸಾಧ್ಯ.

ಡೂನ್‌ನಲ್ಲಿ ನಾಪತ್ತೆ

ಏಮ್ಸ್‌ನ ವಾಹನವೊಂದು ಹೃಷೀಕೇಶದಿಂದ ದಾಸ್ ಅವರನ್ನು ಡೆಹ್ರಾಡೂನ್‌ಗೆ ಹೊತ್ತು ತಂದ ಏಮ್ಸ್‌ನ ವಾಹನ ಅವರನ್ನು ಜಿಲ್ಲಾಧಿಕಾರಿ ಮನೆಯ ಎದುರು ಇಳಿಸಿ ಹೋಯಿತು. ಮೂಗಿನಿಂದ ರಕ್ತ ಸುರಿಯುತ್ತಿದ್ದ ದಾಸ್ ವಿಪರೀತ ಸುಸ್ತಾಗಿದ್ದರು. ತಮ್ಮಗೆಳೆಯನೊಬ್ಬನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡರು. ಅವನ ಸಹಾಯದಿಂದ ಮ್ಯಾಕ್ಸ್ ಆಸ್ಪತ್ರೆಗೆ ಹೋದರೆ ಅಲ್ಲಿನ ವೈದ್ಯರು ಚಿಕಿತ್ಸೆ ಕೊಡಲು ನಿರಾಕರಿಸಿದರು. ನಂತರ ಡೂನ್‌ ಆಸ್ಪತ್ರೆಗೆ ತೆರಳಿದವರು ನಂತರ ಯಾರ ಕಣ್ಣಿಗೂ ಬೀಳಲಿಲ್ಲ.

ಆಸ್ಪತ್ರೆ ಆಡಳಿತವರ್ಗ ಸಿಸಿಟಿಸಿ ಫೂಟೇಜ್ ನೋಡಿದಾಗ ದಾಸ್ ಇಲ್ಲಿಂದ ತಾವಾಗಿಯೇ ಹೊರಹೋಗಿದ್ದಾರೆ ಎಂದು ಹೇಳಿತು. ಆದರೆ ಫೂಟೇಜ್ ಈವರೆಗೆ ಸಾರ್ವಜನಿವಾಗಿಲ್ಲ.

ತನ್ನನ್ನು ಹೃಷೀಕೇಶದಿಂದ ಡೆಹ್ರಾಡೂನ್‌ಗೆ ಏಕೆ ಕಳಿಸಿದರೋ ಗೊತ್ತಾಗುತ್ತಿಲ್ಲ ಎಂದು ದಾಸ್ ತಮ್ಮ ಆಪ್ತರೊಡನೆ ಹೇಳಿಕೊಂಡಿದ್ದರು. ನನ್ನನ್ನು ವೈದ್ಯಕೀಯ ಪ್ರವಾಸಕ್ಕೆ ಕಳಿಸುವ ಯಾವ ಒತ್ತಡ ಉತ್ತರಖಂಡ ಸರ್ಕಾರದ ಮೇಲಿತ್ತೋ ಗೊತ್ತಿಲ್ಲ ಎಂದು ದಾಸ್ ನುಡಿದಿದ್ದರು.

ಹೈಕೋರ್ಟ್ ತೀರ್ಪಿನ ನಂತರವೂ ಪೊಲೀಸರು ದಾಸ್ ಅವರನ್ನು ಪತ್ತೆ ಹೆಚ್ಚಲು ಹೆಚ್ಚೇನು ಶ್ರಮ ಹಾಕಲಿಲ್ಲ. ದಾಸ್ ಅವರ ಗೆಳೆಯ ಆಚಾರ್ಯ ರವೀಂದ್ರ ಅವರ ಹೇಳಿಕೆ ಉಲ್ಲೇಖಿಸಿ, ‘ದಾಸ್ ಈಗ ಆಂಧ್ರ ಪ್ರದೇಶದಲ್ಲಿ ಕ್ಷೇಮವಾಗಿದ್ದಾರೆ’ ಎಂದು ಹೇಳಿ ಕೈತೊಳೆದುಕೊಂಡರು.

ಅಚ್ಚರಿ ಎನ್ನುವಂತೆಹಮೀರ್‌ಪುರ್‌ನಲ್ಲಿ ಹೇಳಿಕೆ ದಾಖಲಿಸಿದ ತಕ್ಷಣ ರವೀದ್ರ ಸಹ ನಾಪತ್ತೆಯಾದರು. ಅವರು ಒತ್ತಡದಲ್ಲಿ ಹೇಳಿಕೆ ನೀಡಿದೆ? ದಾಸ್ ಆಂಧ್ರದಲ್ಲಿ ಇದ್ದಾರೆ ಎಂದಾದರೆ ಸರ್ಕಾರ ಅವರನ್ನು ಪತ್ತೆಹಚ್ಚಲು ಏಕೆ ಗಮನ ಕೊಡುತ್ತಿಲ್ಲ?

ಸಂಶಯಗಳು ಹೆಚ್ಚಾದ ನಂತರ ಉತ್ತರಖಂಡ ಸರ್ಕಾರವು ದಾಸ್ ನಮ್ಮ ರಾಜ್ಯದಲ್ಲಿಯೇ ಇದ್ದಾರೆ ಎಂದು ಹೇಳಿತು. ದಾಸ್ ಎಲ್ಲಿದ್ದಾರೆ ಎನ್ನುವ ರಹಸ್ಯಕ್ಕೆ ಈ ಹೇಳಿಕೆಗಳು ಇನ್ನಷ್ಟು ಕುತೂಹಲ ಹೆಚ್ಚಿಸಿದವು ಅಷ್ಟೇ.

ಹೋರಾಟಗಾರ ಉತ್ತರಖಂಡದಲ್ಲಿಯೇ ಇದ್ದಾರೆ ಎಂದಾದರೆ ಎಲ್ಲಿದ್ದಾರೆ? ಮತ್ತ ಅವರೇಕೆ ಯಾರೊಬ್ಬರ ಸಂಪರ್ಕದಲ್ಲಿಯೂ ಇಲ್ಲ ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ.

ಉತ್ತರಖಂಡದ ಪೊಲೀಸ್ ಮುಖ್ಯಸ್ಥರು ನಾಪತ್ತೆ ಪ್ರಕರಣದ ತನಿಖೆಯನ್ನೂ ನಿರಾಕರಿಸಿದರು. ದಾಸ್ ಸ್ವಇಚ್ಛೆ ಅಜ್ಞಾತಸ್ಥಳದಲ್ಲಿದ್ದಾರೆ. ಹೈಕೋರ್ಟ್‌ ಆದೇಶದ ನಿಜವಾದ ಅರ್ಥ ಏನೆಂದು ನನಗೆ ಗೊತ್ತಿಲ್ಲ ಎಂದು ಅವರುಪ್ರತಿಕ್ರಿಯಿಸಿದರು.

ದಾಸ್ ಅವರ ಮತ್ತೊಬ್ಬ ಗೆಳೆಯ ವಿಕಾಸ್ ಸಹ ಇದೀಗ ನಾಪತ್ತೆಯಾಗಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಮೌನವೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ದಾಸ್ ನಾಪತ್ತೆ ಕುರಿತು ಮಾಧ್ಯಮಗಳು ಕೇಳುವ ಪ್ರಶ್ನೆಗಳನ್ನು ಜಾಣತನದಿಂದ ನಿರ್ವಹಿಸಿದರೆ ಗಂಗೆ ಏಕೆ ಇನ್ನೂ ಕೊಳಕಾಗಿಯೇ ಹರಿಯುತ್ತಾಳೆ ಎನ್ನುವ ಪ್ರಶ್ನೆಯಿಂದ ನುಣುಚಿಕೊಳ್ಳಬಹುದು ಎಂದು ಉತ್ತರಖಂಡ ಪೊಲೀಸರು ಭಾವಿಸಿದಂತಿದೆ.

ಸಾಯುತ್ತಿರುವ ನದಿ ಮತ್ತು ಹೋರಾಟಗಾರರು

ಗಂಗಾ ಸಚಿವಾಲಯ ವಿದೇಶಿ ಸಂಸ್ಥೆಗಳೊಂದಿಗೆ ವಿಚಾರಗೋಷ್ಠಿಗಳನ್ನು ನಡೆಸಲು ಇಂಥ ವಿವಾದಗಳು ಮುಖ್ಯಕಾರಣ. ಹೋರಾಟಗಾರರು ಇನ್ನೂ ಪ್ರತಿಭಟನೆ ಮಾಡುತ್ತಲೇ ಇದ್ದಾರೆ.

ದಾಸ್ ಇದೀಗ ಪೊಲೀಸ್ ಕಣ್ಗಾವಲಿನಲ್ಲಿ ದಿನದೂಡುತ್ತಿದ್ದಾರೆ. ಅವರಿಗೆ ಒತ್ತಾಯದಿಂದ ಆಹಾರ ತಿನ್ನಿಸಲಾಗುತ್ತಿದೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ.

ನಾಪತ್ತೆಯಾಗುವ ಮೊದಲು ದಾಸ್‌ ತನ್ನ ಗೆಳೆಯರು ತನ್ನ ಹೆಸರಿನಲ್ಲಿ ಅಕ್ರಮ ನಡೆಸಲು ಯತ್ನಿಸುತ್ತಿರುವ ಬಗ್ಗೆ ಆತಂಕ ತೋಡಿಕೊಂಡಿದ್ದರು.

ಈಚೆಗಷ್ಟೇ ಮೃತಪಟ್ಟ ಗಂಗಾ ಸಂರಕ್ಷಣೆಗೆ ಹೋರಾಡುತ್ತಿದ್ದ ಜಿ.ಡಿ.ಅಗರ್ವಾಲ್, ಗಂಗಾ ಚಳವಳಿಕಾರರು ನದಿಯನ್ನು ಉಳಿಸಲು ಹೋರಾಡುತ್ತಲಲ್ಲ. ಬದಲಾಗಿ ನಾಯಕರು ಯಾರಾಗಬೇಕು ಎಂದು ಚಳಿವಳಿಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದರ.

ನದಿ ಮತ್ತು ಅದರ ಉಳಿವಿಆಗಿ ಹೋರಾಡುತ್ತಿರುವ ಹೋರಾಟಗಾರರ ಜೀವುಗಳ ಮಾತ್ರ ಇಂದು ಸಂಕಷ್ಟ ಸ್ಥಿತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT