ಬಿಜೆಪಿ ಸಂಸದೆಯರ ಜೊತೆಗೆ ಪ್ರಧಾನಿ ಸಂವಾದ

ಗುರುವಾರ , ಜೂಲೈ 18, 2019
22 °C

ಬಿಜೆಪಿ ಸಂಸದೆಯರ ಜೊತೆಗೆ ಪ್ರಧಾನಿ ಸಂವಾದ

Published:
Updated:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಮ್ಮ ನಿವಾಸದಲ್ಲಿ ನಡೆದ ಉಪಾಹಾರ ಕೂಟದಲ್ಲಿ ಪಕ್ಷದ ಮಹಿಳಾ ಸಂಸದರ ಜೊತೆಗೆ ಸಭೆ ನಡೆಸಿದರು.

ವಿವಿಧ ವರ್ಗಗಳನ್ನು ಪ್ರತಿನಿಧಿಸುವ ಪಕ್ಷದ ಸಂಸದರ ಜೊತೆಗೆ ಪ್ರತ್ಯೇಕವಾಗಿ ಪ್ರಧಾನಿ ಮುಖಾಮುಖಿ ಭೇಟಿಯಾಗಿ ಚರ್ಚಿಸುತ್ತಿರುವ ಐದನೇ ಸಭೆ ಇದು. ಪ್ರಧಾನಿ ಚರ್ಚಿಸಲು ಅನುವಾಗುವಂತೆ ಪಕ್ಷದ ಸಂಸದರನ್ನು ಏಳು ಗುಂಪುಗಳಾಗಿ ಬಿಜೆಪಿ ವಿಂಗಡಿಸಿದೆ.

ಅದರಂತೆ ಈಗಾಗಲೇ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳನ್ನು ಪ್ರತಿನಿಧಿಸುವ ಸಂಸದರು ಹಾಗೂ ಇದೇ ವರ್ಗದ ಈ ಹಿಂದೆ ಸಚಿವರಾಗಿದ್ದ ಪ್ರಮುಖರನ್ನು ಪ್ರಧಾನಿ ಭೇಟಿಯಾಗಿ ಚರ್ಚಿಸಿದ್ದಾರೆ.

ಪ್ರಧಾನಿ ಜೊತೆಗೆ ನೇರ ಸಂವಹನ ನಡೆಸಲು ಪಕ್ಷದ ಸಂಸದರಿಗೆ ಅವಕಾಶ ಕಲ್ಪಿಸಲು ಬಿಜೆಪಿ ಈ ಕ್ರಮಕೈಗೊಂಡಿದೆ. ಸಂಸತ್ತಿಗೆ ಸಂಬಂಧಿಸಿದ ವಿಷಯಗಳು ಸೇರಿ ವಿವಿಧ ವಿಷಯಗಳ ಕುರಿತು ಪ್ರಧಾನಿ ಮಾರ್ಗದರ್ಶನ ಮಾಡುವರು ಎಂದು ಮೂಲಗಳು ತಿಳಿಸಿವೆ.

16ನೇ ಲೋಕಸಭೆಯ ಅವಧಿಯಲ್ಲಿಯೂ ಪ್ರಧಾನಿ ಪಕ್ಷದ ವಿವಿಧ ಸ್ತರದ ಸಂಸದರ ಜೊತೆಗೆ ಪ್ರತ್ಯೇಕ ಸಭೆ ನಡೆಸಿ ಸರ್ಕಾರದ ಕಾರ್ಯಸೂಚಿಯನ್ನು ವಿವರಿಸಿದ್ದರು.

17ನೇ ಲೋಕಸಭೆಗೆ ಒಟ್ಟು 78 ಮಹಿಳೆಯರು ಆಯ್ಕೆಯಾಗಿದ್ದು, ಸ್ವಾತಂತ್ರ್ಯಾನಂತರ ಇದು ಸಂಸತ್ತಿನಲ್ಲಿ ಮಹಿಳೆಯರ ಗರಿಷ್ಠ ಪ್ರಾತಿನಿಧ್ಯವಾಗಿದೆ. ಇವರಲ್ಲಿ 41 ಮಂದಿ ಬಿಜೆಪಿಯ ಸಂಸದೆಯರು. 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !