ಮೋದಿ ಪ್ರವಾಸ, ಸಾಧನೆಯ ಜಾಹೀರಾತಿಗಾಗಿ ₹6,590 ಕೋಟಿ ಖರ್ಚು

7

ಮೋದಿ ಪ್ರವಾಸ, ಸಾಧನೆಯ ಜಾಹೀರಾತಿಗಾಗಿ ₹6,590 ಕೋಟಿ ಖರ್ಚು

Published:
Updated:
Deccan Herald

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸ ಮತ್ತು ಸರ್ಕಾರದ ಸಾಧನೆಯ ಜಾಹೀರಾತಿಗೆ ನಾಲ್ಕೂವರೆ ವರ್ಷಗಳಲ್ಲಿ ₹6,590 ಕೋಟಿ ಖರ್ಚಾಗಿದೆ ಎಂದು ವರದಿಯಾಗಿದೆ. 

ಮೋದಿ ಅವರು ಒಟ್ಟು 84 ವಿದೇಶ ಪ್ರವಾಸ ಮಾಡಿದ್ದಾರೆ. ಇದಕ್ಕೆ ₹1,960 ಕೋಟಿ ವೆಚ್ಚವಾಗಿದೆ. ಸರ್ಕಾರದ ವಿವಿಧ ಯೋಜನೆ
ಗಳು ಮತ್ತು ಸಾಧನೆಗಳ ಪ್ರಚಾರಕ್ಕೆ ₹4,630 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. 

ಪ್ರತಿ ಪ್ರವಾಸಕ್ಕೆ ತಗಲಿದ ವೆಚ್ಚದ ಜತೆಗೆ ‘ಏರ್ ಇಂಡಿಯಾ ಒನ್‌’ ವಿಶೇಷ ವಿಮಾನದ ನಿರ್ವಹಣೆ ಹಾಗೂ ಹಾಟ್‌ಲೈನ್ ನಿರ್ವಹಣೆ ವೆಚ್ಚವನ್ನೂ ಇದಕ್ಕೆ ಸೇರಿಸಲಾಗಿದೆ ಎಂದು ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ.ಕೆ. ಸಿಂಗ್‌ ಅವರು ಸಂಸತ್ತಿನಲ್ಲಿ ಉತ್ತರ ನೀಡಿದ್ದಾರೆ. 

ಜಾಗತಿಕ ವ್ಯವಹಾರಗಳಲ್ಲಿ ಭಾರತದ ವರ್ಚಸ್ಸು ಹೆಚ್ಚಿಸುವ ಉದ್ದೇಶದಿಂದ ಮೋದಿ ಅವರು ಹಲವು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಜಪಾನ್‌ ಪ್ರಧಾನಿ ಶಿಂಜೊ ಅಬೆ ಮುಂತಾದವರನ್ನು ಹಲವು ಬಾರಿ ಭೇಟಿಯಾಗಿದ್ದಾರೆ. 

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 1

  Sad
 • 3

  Frustrated
 • 13

  Angry

Comments:

0 comments

Write the first review for this !