ಮಂಗಳವಾರ, ಮಾರ್ಚ್ 2, 2021
28 °C

‘ಉಗ್ರವಾದಕ್ಕೆ ವಿಶೇಷಾಧಿಕಾರ ಕಾರಣ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜಮ್ಮು  ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷಾಧಿಕಾರ ರದ್ದತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ವಿಶೇಷಾಧಿಕಾರವು ಪ್ರತ್ಯೇಕತಾವಾದ, ಭ್ರಷ್ಟಾಚಾರ ಮತ್ತು ವಂಶಾಡಳಿತಕ್ಕೆ ನೆರವಾಗಿತ್ತು, ಭಯೋತ್ಪಾದನೆ ಹರಡಲು ಪಾಕಿಸ್ತಾನದ ಕೈಯಲ್ಲಿನ ಉಪಕರಣವಾಗಿತ್ತು. ಇವಿಷ್ಟು ಬಿಟ್ಟರೆ, ವಿಶೇಷಾಧಿಕಾರದಿಂದ ಯಾವ ಪ್ರಯೋಜನವೂ ಆಗಿಲ್ಲ ಎಂದು ಹೇಳಿದ್ದಾರೆ. 

ಸುದ್ದಿವಾಹಿನಿ ಮೂಲಕ ದೇಶವನ್ನು ಉದ್ದೇಶಿಸಿ ಮೋದಿ ಗುರುವಾರ ಮಾತನಾಡಿದರು. ವಿಶೇಷಾಧಿಕಾರ ರದ್ದತಿಯು ಐತಿಹಾಸಿಕ ತೀರ್ಮಾನ ಎಂದ ಅವರು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಹೊಸ ಯುಗ ಆರಂಭವಾಗಿದೆ ಎಂದರು. 

ಶ್ಯಾಮಪ್ರಸಾದ್‌ ಮುಖರ್ಜಿ, ಅಟಲ್‌ ಬಿಹಾರಿ ವಾಜಪೇಯಿ, ಸರ್ದಾರ್‌ ಪಟೇಲ್‌ ಮತ್ತು ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ ಎಂದು ಹೇಳಿದರು. 

ಇಡೀ ದೇಶಕ್ಕಾಗಿ ಮಾಡಿದ ಕಾನೂನುಗಳ ಪ್ರಯೋಜನಗಳು 370ನೇ ವಿಧಿಯಿಂದಾಗಿ ಜಮ್ಮು  ಮತ್ತು ಕಾಶ್ಮೀರದ 1.5 ಕೋಟಿ ಜನರಿಗೆ ಅನ್ವಯವೇ ಆಗುತ್ತಿರಲಿಲ್ಲ. ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರವು ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದಲಿದೆ. ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ಹಿಡಿತದಿಂದ ಈ ಪ್ರದೇಶವನ್ನು ಬಿಡಿಸುತ್ತೇವೆ ಎಂದು ಹೇಳಿದರು. 

***

ಜಮ್ಮು ಮತ್ತು ಕಾಶ್ಮೀರವು ದೀರ್ಘ ಕಾಲ ಕೇಂದ್ರಾಡಳಿತ ಪ್ರದೇಶವಾಗಿ ಉಳಿಯದು. ಆದರೆ, ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶವಾಗಿಯೇ ಉಳಿಸಿಕೊಳ್ಳಲಾಗುವುದು

ನರೇಂದ್ರ ಮೋದಿ, ಪ್ರಧಾನಿ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು