ಚೆಂಬೂರ್‌–ವಡಾಲ ಮಧ್ಯೆ ಮೊನೊ ರೈಲು ಸೇವೆ ಪುನರಾರಂಭ

7

ಚೆಂಬೂರ್‌–ವಡಾಲ ಮಧ್ಯೆ ಮೊನೊ ರೈಲು ಸೇವೆ ಪುನರಾರಂಭ

Published:
Updated:

ಮುಂಬೈ: ಚೆಂಬೂರ್‌ ಮತ್ತು ವಡಾಲ ನಡುವಿನ ಮೊನೊ ರೈಲು ಸಂಚಾರ ಸಾರ್ವಜನಿಕ ಸೇವೆಗೆ ಶನಿವಾರ ಪುನರಾರಂಭವಾಗಿದೆ.

ಚೆಂಬೂರ್‌ ಮತ್ತು ವಡಾಲ ಮಧ್ಯೆ ಸಂಚರಿಸುತ್ತಿದ್ದ ವೇಳೆ 2017ರ ನವೆಂಬರ್‌ 9ರಂದು ಮೈಸೂರು ಕಾಲೊನಿ ಬಳಿ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಎಎನ್‌ಐ ಟ್ವಿಟ್‌ ಮಾಡಿದೆ.

ಘಟನೆ ನಡೆದು 10 ತಿಂಗಳ ಬಳಿಕ ಮೊನೊ ರೈಲು ಸಂಚಾರವನ್ನು ಸೇವೆ ಸಿದ್ಧಗೊಳಿಸಿ, ಸಮರ್ಪಿಸಲಾಗಿದೆ. 


 ಮೊನೊ ರೈಲು ಚಿತ್ರ: ಪಿಟಿಐ

2014ರ ಫೆಬ್ರುವರಿಯಲ್ಲಿ ಚೆಂಬೂರ್‌ ಮತ್ತು ವಡಾಲ ನಡುವೆ ಮೊನೊ ರೈಲು ಸಂಚಾರ ಆರಂಭಿಸಲಾಗಿತ್ತು.

ಅಧಿಕೃತವಾಗಿ ಆರಂಭಗೊಳ್ಳುವುದಕ್ಕೂ ಮೊದಲು ಪ್ರಯೋಗಾತ್ಮಕ ಸಂಚಾರ ನಡೆಸಲಾಗಿತ್ತು. ಈ ವೇಳೆ ಜನರು ಕುತೂಹಲದಿಂದ ಮೋನೊ ರೈಲಿನ ಒಳಹೊರಗೆ ಇಣಕಿ, ಆಸೀನರಾಗಿ ಖುಷಿಪಟ್ಟರು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !