ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ ಸಿ.ಎಂ ಸ್ವಿಟ್ಜರ್ಲೆಂಡ್‌ ಪ್ರವಾಸಕ್ಕೆ ₹ 1.58 ಕೋಟಿ ವೆಚ್ಚ

Last Updated 24 ಏಪ್ರಿಲ್ 2019, 20:40 IST
ಅಕ್ಷರ ಗಾತ್ರ

ಭೋಪಾಲ್‌ (ಪಿಟಿಐ): ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ಜನವರಿ ತಿಂಗಳಲ್ಲಿ ನಡೆದಿದ್ದ ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಧ್ಯ ಪ್ರದೇಶದ ಮುಖ್ಯಮಂತ್ರಿ ಮತ್ತು ಅವರ ಆಪ್ತ ಮೂವರು ಅಧಿಕಾರಿಗಳಿಗಾಗಿ ವ್ಯವಸ್ಥೆ ಕಲ್ಪಿಸಲು ಮಧ್ಯ ಪ್ರದೇಶ ಸರ್ಕಾರ ₹ 1.58 ಕೋಟಿ ವೆಚ್ಚ ಮಾಡಿದೆ.

ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತ ಅಜಯ್‌ ದುಬೆ ಅವರು ಆರ್‌ಟಿಐಮೂಲಕ ಕೇಳಿದ್ದ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಿದೆ.

ಮುಖ್ಯಮಂತ್ರಿ ಕಮಲ್‌ನಾಥ್‌ ಜತೆಯಲ್ಲಿ ಅಲ್ಲಿನ ಮುಖ್ಯ ಕಾರ್ಯದರ್ಶಿ ಎಸ್‌.ಆರ್‌. ಮೊಹಾಂತಿ, ಮುಖ್ಯಮಂತ್ರಿ
ಯವರ ಪ್ರಧಾನ ಕಾರ್ಯದರ್ಶಿ ಅಶೋಕ್‌ ಬರ್ನವಾಲ್‌ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಸುಲೆಮಾನ್‌ ದಾವೋಸ್‌ ಸಮಾವೇಶದಲ್ಲಿ ಭಾಗವಹಿಸಿದ್ದರು.

ಮಧ್ಯ ಪ್ರದೇಶದ ಕೈಗಾರಿಕಾ ನೀತಿಯನ್ನು ಪ್ರಚುರಪಡಿಸುವುದರ ಜತೆಗೆ ರಾಜ್ಯದತ್ತ ಹೂಡಿಕೆದಾರರನ್ನು ಸೆಳೆಯಲು ಈ ತಂಡ ಹೋಗಿತ್ತು ಎಂಬ ಮಾಹಿತಿಯನ್ನು ಸರ್ಕಾರ ನೀಡಿದೆ.

ವಿಮಾನ ಪ್ರಯಾಣದ ಟಿಕೆಟ್‌ ಮತ್ತು ವೀಸಾ ಖರ್ಚು ವೆಚ್ಚ ₹ 30 ಲಕ್ಷ, ಹೋಟೆಲ್‌ ವೆಚ್ಚ ₹ 45 ಲಕ್ಷ, ಸ್ಥಳೀಯ ಸಾರಿಗೆ ವೆಚ್ಚ ₹ 9.5 ಲಕ್ಷ, ಜ್ಯೂರಿಚ್‌ ವಿಮಾನ ನಿಲ್ದಾಣದಲ್ಲಿ ವಿಐಪಿ ಕೋಣೆಗೆ ₹ 2 ಲಕ್ಷ, ಸಾರಿಗೆ ವಿಮೆ ₹ 50 ಸಾವಿರ, ಸಮಾವೇಶದಲ್ಲಿ ಪಾಲ್ಗೊಳ್ಳುವಿಕೆ ಮತ್ತು ಪ್ರಚಾರ ಸಾಮಗ್ರಿಗಳ ಖರ್ಚು ₹ 40 ಲಕ್ಷ, ₹ 1.5 ಲಕ್ಷ ಡಿ.ಎ ಹಾಗೂ ಇತರೆ ವೆಚ್ಚ ₹ 15 ಲಕ್ಷ ಎಂದು ಮಾಹಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT