ಮುಘಲ್‌ಸರೈ ರೈಲು ನಿಲ್ದಾಣ ಈಗ ದೀನ್‌ ದಯಾಳ್‌ ಉಪಾಧ್ಯಾಯ ಜಂಕ್ಷನ್‌

7

ಮುಘಲ್‌ಸರೈ ರೈಲು ನಿಲ್ದಾಣ ಈಗ ದೀನ್‌ ದಯಾಳ್‌ ಉಪಾಧ್ಯಾಯ ಜಂಕ್ಷನ್‌

Published:
Updated:

ಲಖನೌ: ಮುಘಲ್‌ಸರೈ ರೈಲು ನಿಲ್ದಾಣದ ಹೆಸರು ಅಧಿಕೃತವಾಗಿ ಇಂದು(ಭಾನುವಾರ) ದೀನ್‌ ದಯಾಳ್‌ ಉಪಾಧ್ಯಾಯ ಜಂಕ್ಷನ್‌ ಎಂದು ಬದಲಾಗಲಿದೆ. 

ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಷಾ, ರೈಲ್ವೆ ಸಚಿವ ಪಿಯುಶ್‌ ಗೋಯಲ್‌, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದ್ದು, ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯಿಂದಲೇ ನಡೆಸಲ್ಪಡುವ ಒಂದು ಪ್ರಯಾಣಿಕರ ರೈಲು ಮತ್ತು ಒಂದು ಸರಕು ರೈಲಿಗೆ ಹಸಿರು ನಿಶಾನೆ ತೋರುವರು. ಜೊತೆಗೆ ‘ಸ್ಮಾರ್ಟ್‌ ಯಾರ್ಡ್‌’ ಯೋಜನೆಗೆ ಚಾಲನೆ ನೀಡುವರು.

ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ಸರಕು ರೈಲು ನಿರ್ವಹಣೆ ಮಾಡುತ್ತಿರುವುದು ಇದೇ ಮೊದಲು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಿಲ್ದಾಣಕ್ಕೆ ಕೇಸರಿ ಬಣ್ಣವನ್ನು ಬಳಿಯಲಾಗಿದ್ದು, ಸೈನ್‌ಬೋರ್ಡ್‌ಗಳಲ್ಲಿ ಹೊಸ ಹೆಸರು (ದೀನ್‌ ದಯಾಳ್‌ ಉಪಾಧ್ಯಾಯ) ಬರೆಯಲಾಗಿದೆ.

ಈ ವೇಳೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್‌ ಸಿನ್ಹಾ, ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ, ಹಿರಿಯ ಬಿಜೆಪಿ ಮುಖಂಡರು ಉಪಸ್ಥಿತರಿರುವರು.

1968 ಫೆಬ್ರುವರಿ 11ರಂದು ಆರ್‌ಎಸ್‌ಎಸ್‌ ನಾಯಕ ದೀನ್‌ ದಯಾಳ್‌ ಉಪಾಧ್ಯಾಯ ಅವರು ನಿಗೂಢವಾಗಿ ಇದೇ ನಿಲ್ದಾಣದಲ್ಲಿ ಸಾವಿಗೀಡಾಗಿದ್ದರು. ಇದು ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜನ್ಮಸ್ಥಳವೂ ಹೌದು. 

ಕಳೆದ ವರ್ಷ ಮುಘಲ್‌ಸರೈ ರೈಲ್ವೆ ನಿಲ್ದಾಣದ ಹೆಸರು ಬದಲಾವಣೆಗೆ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !