ಇಂಡೊನೇಷ್ಯಾದಲ್ಲಿ ಭೂಕಂಪ: ಹತ್ತು ಸಾವು, 150 ಮನೆ ನೆಲಸಮ

7

ಇಂಡೊನೇಷ್ಯಾದಲ್ಲಿ ಭೂಕಂಪ: ಹತ್ತು ಸಾವು, 150 ಮನೆ ನೆಲಸಮ

Published:
Updated:
Deccan Herald

ಮತರಾಂ: ‘ಇಲ್ಲಿನ ಲೊಂಬೊಕ್‌ ದ್ವೀಪದಲ್ಲಿ ಸರಣಿ ಪ್ರಬಲ ಭೂಕಂಪ ಸಂಭವಿಸಿದ್ದು, ಹತ್ತು ಮಂದಿ ಸಾವನ್ನಪ್ಪಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ರಾತ್ರಿ ವೇಳೆ ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್‌ ಮಾಪನದಲ್ಲಿ 6.9ರಷ್ಟು ಇತ್ತು ಎಂದು ಅಮೆರಿಕದ ಭೂವಿಜ್ಞಾನ ಸಂಸ್ಥೆ ತಿಳಿಸಿದೆ.

30ಕ್ಕೂ ಅಧಿಕ ಮಂದಿ ಮನೆ ಕಳೆದುಕೊಂಡಿದ್ದು, 150 ಮನೆಗಳು, ದೇವಾಲಯಗಳು ನಾಶಗೊಂಡಿವೆ. 

‘ಲೊಂಬೊಕ್‌ನಲ್ಲಿ ಸಂಭವಿಸಿದ ಭೂಕಂಪದಿಂದ ಮನೆಯ ಅವಶೇಷಗಳು ಕುಸಿದು ಇಬ್ಬರು ಸಾವನ್ನಪ್ಪಿದರು’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ವಕ್ತಾರ ಸುಟೊಪೊ ಪುರ್ವೊ ನುಗ್ರೊಹೊ ತಿಳಿಸಿದ್ದಾರೆ.

‘ಭೂಕಂಪ ಸಂಭವಿಸಿದ ವೇಳೆ ಈ ಭಾಗದಲ್ಲಿ ಜನರು ಮನೆಯ ಹೊರಗಡೆ ನೆಲೆಸಿದ್ದರು. ಇದೇ ಕಾರಣದಿಂದ ಆಗಸ್ಟ್‌ 5ರಂದು ಸಂಭವಿಸಿದ ಭೂಕಂಪಕ್ಕೆ ಹೋಲಿಸಿದರೆ, ಲೊಂಬೊಕ್‌ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕಡಿಮೆ’ ಎಂದು ಸುಟೊಪೊ ತಿಳಿಸಿದರು.

ಜುಲೈ 29 ಹಾಗೂ ಆಗಸ್ಟ್‌ 5ರಂದು ಬಾಲಿಯಲ್ಲಿ ಸಂಭವಿಸಿದ ಎರಡು ಭೂಕಂಪದಿಂದ ಸುಮಾರು 500 ಮಂದಿ ಪ್ರಾಣ ಕಳೆದುಕೊಂಡಿದ್ದರು. 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !