‘ಮುಸ್ಲಿಂ ಮಹಿಳೆಯರು ಕಾಂಗ್ರೆಸ್‌ ವಿರುದ್ಧ ಹೋರಾಡಲಿ’

7
ತ್ರಿವಳಿ ತಲಾಖ್‌ ಮಸೂದೆಗೆ ರಾಜ್ಯಸಭೆಯಲ್ಲಿ ವಿರೋಧ

‘ಮುಸ್ಲಿಂ ಮಹಿಳೆಯರು ಕಾಂಗ್ರೆಸ್‌ ವಿರುದ್ಧ ಹೋರಾಡಲಿ’

Published:
Updated:

ನವದೆಹಲಿ: ಸಾಮಾಜಿಕ ನ್ಯಾಯದ ಭಾಗವಾಗಿರುವ ಲಿಂಗ ಸಮಾನತೆ ಸಾರುವ ‘ತ್ರಿವಳಿ ತಲಾಖ್’ ಮಸೂದೆಯನ್ನು ರಾಜ್ಯಸಭೆಯಲ್ಲಿ ವಿರೋಧಿಸುತ್ತಿರುವ ಕಾಂಗ್ರೆಸ್‌ ವಿರುದ್ಧ ಮುಸ್ಲಿಂ ಮಹಿಳೆಯರು ದೇಶದಾದ್ಯಂತ ಹೋರಾಟ ನಡೆಸಬೇಕು ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಮನವಿ ಮಾಡಿದರು.

ಸಂಸತ್‌ನ ಮುಂಗಾರು ಅಧೆವೇಶನದ ಕೊನೆಯ ದಿನವಾದ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತ್ರಿವಳಿ ತಲಾಖ್‌ ಪದ್ಧತಿಗೆ ಕಡಿವಾಣ ಹಾಕುವಂತಹ ಮುಸ್ಲಿಂ ಮಹಿಳಾ ವಿವಾಹ ಹಕ್ಕುಗಳ ರಕ್ಷಣೆ ಮಸೂದೆಯಿಂದ ದೇಶದಲ್ಲಿನ 10 ಕೋಟಿಗೂ ಅಧಿಕ ಮುಸ್ಲಿಂ ಮಹಿಳೆಯರಿಗೆ ನೆರವಾಗುವಾಗಲಿದೆ. ಲೋಕಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಿರುವ ಕಾಂಗ್ರೆಸ್‌, ಅಧ್ಯಯನದ ನೆಪದಲ್ಲಿ ರಾಜ್ಯಸಭೆಯಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವುದು ಎಷ್ಟು ಸೂಕ್ತ? ಎಂದು ಪ್ರಶ್ನಿಸಿದರು.

ಹಠಾತ್ ವಿಚ್ಛೇದನದ ಭೀತಿಯಲ್ಲಿರುವ ಮುಸ್ಲಿಂ ಮಹಿಳೆಯರ ಪರವಾಗಿರುವ ಈ ಮಸೂದೆಗೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸುತ್ತಿದ್ದು, ಮಹಿಳೆಯರೆಲ್ಲ ಈ ಧೋರಣೆಯನ್ನು ಖಂಡಿಸಬೇಕು ಎಂದು ಅವರು ಆಗ್ರಹಿಸಿದರು.

ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಲೋಕಸಭೆಯು 21 ವಿಧಾಯಕಗಳಿಗೆ ಅನುಮೋದನೆ ನೀಡಿರುವುದು ದಾಖಲೆಯಾಗಿದೆ. ರಾಜ್ಯಸಭೆಯಲ್ಲೂ 12 ವಿಧೇಯಕಗಳಿಗೆ ಅನುಮೋದನೆ ದೊರೆತಿದೆ. ಇವುಗಳಲ್ಲಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾವಿಧಾನಿಕ ಸ್ಥಾನಮಾನ ನೀಡಿರುವ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆಯ ತಿದ್ದುಪಡಿ ಕಾಯ್ದೆ ಸೇರಿವೆ ಎಂದು ಅವರು ಹೇಳಿದರು.

ಅವಿಶ್ವಾಸ ಗೊತ್ತುವಳಿ, ರಾಜ್ಯಸಭೆಯ ಉಪಸಭಾಪತಿ ಸ್ಥಾನದ ಚುನಾವಣೆಯಂತಹ ಎಲ್ಲ ಅಡೆತಡೆಗಳನ್ನು ಯಶಸ್ವಿಯಾಗಿ ಎದುರಿಸಿಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಮಹತ್ವದ ವಿಧೇಯಕಗಳಿಗೆ ಅನುಮೋದನೆ ಪಡೆದಿರುವುದು ಅಭಿನಂದನೀಯ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !