ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2015ರಿಂದ ಚೀನಾ ನಡೆಸಿರುವ 2,264 ಆಕ್ರಮಣದ ಬಗ್ಗೆ ನಡ್ಡಾ ಮೋದಿಯನ್ನು ಕೇಳಲಿ: ಚಿದು

Last Updated 23 ಜೂನ್ 2020, 10:08 IST
ಅಕ್ಷರ ಗಾತ್ರ

ನವದೆಹಲಿ: 2015ರಿಂದ ಚೀನಾ ಭಾರತದ ಮೇಲೆ 2,264 ಬಾರಿ ಆಕ್ರಮಣ ನಡೆಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸುವ ಸಾಹಸಕ್ಕೆ ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಕೈ ಹಾಕಲ್ಲ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಮಂಗಳವಾರ ತಿರುಗೇಟು ನೀಡಿದ್ದಾರೆ.

ಈ ಹಿಂದೆ 2010 ಮತ್ತು 2013ರಲ್ಲಿ ಚೀನಾ ಭಾರತದ ಮೇಲೆ 600 ಬಾರಿ ದಾಳಿ ನಡೆಸಿದಾಗ ಯುಪಿಎ ಸರ್ಕಾರ ಏನು ಮಾಡಿತ್ತು ಎಂದು ಜೆ.ಪಿ ನಡ್ಡಾ ಸರಣಿ ಟ್ವೀಟ್‌ ಮೂಲಕ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪಿ.ಚಿದಂಬರಂ, ‘ಯುಪಿಎ ಸರ್ಕಾರವಿದ್ದಾಗ ಚೀನಾ ದಾಳಿ ನಡೆಸಿತ್ತು. ಆದರೆ, ಆಗ ಭಾರತದ ಯಾವುದೇ ಭೂಪ್ರದೇಶವನ್ನು ವಶಕ್ಕೆ ಪಡೆಯುವಲ್ಲಿ ಚೀನಾ ಸಫಲವಾಗಿಲ್ಲ. ಅಲ್ಲದೇ ಯಾವುದೇ ಸೈನಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿಲ್ಲ’ ಎಂದಿದ್ದಾರೆ.

‘ಇದೇ ಪ್ರಶ್ನೆಯನ್ನು ಜೆ.ಪಿ ನಡ್ಡಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಬೇಕು. ಆದರೆ, ಮೋದಿ ಅವರನ್ನು ಪ್ರಶ್ನಿಸುವ ಸಾಹಸಕ್ಕೆ ಜೆ.ಪಿ ನಡ್ಡಾ ಅವರು ಕೈ ಹಾಕುವುದಿಲ್ಲ’ ಎಂದು ಪಿ.ಚಿದಂಬರಂ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT