ಮಹಾವಿಷ್ಣುವಿನ 11 ನೇ ಅವತಾರ ಮೋದಿ: ಮಹಾರಾಷ್ಟ್ರದ ಬಿಜೆಪಿ ವಕ್ತಾರ

7

ಮಹಾವಿಷ್ಣುವಿನ 11 ನೇ ಅವತಾರ ಮೋದಿ: ಮಹಾರಾಷ್ಟ್ರದ ಬಿಜೆಪಿ ವಕ್ತಾರ

Published:
Updated:

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮಹಾ ವಿಷ್ಣುವಿನ 11ನೇ ಅವತಾರ ಎಂದು ಮಹಾರಾಷ್ಟ್ರದ ಬಿಜೆಪಿ ವಕ್ತಾರ ಅವಧೂತ್ ವಾಘ್ ಟ್ವೀಟಿಸಿದ್ದಾರೆ.

ದೇವರಂಥಾ ನಾಯಕ ಸಿಗುವುದಕ್ಕೆ ಈ ದೇಶ ಪುಣ್ಯ ಮಾಡಿದೆ ಎಂದು ಮರಾಠಿ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ  ವಾಘ್ ಹೇಳಿದ್ದಾರೆ. ವಾಘ್ ಉಪಮೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಅತುಲ್ ಲೊಂಧೇ, ಮೋದಿಯನ್ನು ದೇವರಿಗೆ ಹೋಲಿಸುವ ಮೂಲಕ  ದೇವರಿಗೆ ಅವಮಾನ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಕಳೆದುಕೊಂಡದ್ದನ್ನು ಮರಳಿ ಪಡೆಯಲ ವಾಘ್ ಪ್ರಯತ್ನಿಸುತ್ತಿದ್ದಾರೆ. ಇಂಥಾ ಹೇಳಿಕೆಗಳಿಗೆ ಹೆಚ್ಚು ಪ್ರಾಧಾನ್ಯ ನೀಡುವ ಅಗತ್ಯವಿಲ್ಲ.ಇದು ಬಿಜೆಪಿಯ ಕೆಳಮಟ್ಟದ ಸಂಸ್ಕೃತಿಯನ್ನು ತೋರಿಸುತ್ತದೆ ಎಂದಿದ್ದಾರೆ.

ವಾಘ್ ಅವರು ವಿಜೆಟಿಐನಿಂದ ಇಂಜಿನಿಯರಿಂಗ್ ಪದವಿ ಪಡೆದವರು. ಅವರ ಪದವಿ ಸರ್ಟಿಫಿಕೇಟ್ ನಿಜವೇ ಎಂಬುದನ್ನು ಪರಿಶೀಲಿಸಬೇಕಾದ ಅಗತ್ಯ ಈಗ ಇದೆ. ಅವರಿಂದ ಈ ರೀತಿಯ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದು ಎನ್‍ಸಿಪಿಶಾಸಕ ಜಿತೇಂದ್ರ ಅವ್ಹಾದ್ ಪ್ರತಿಕ್ರಿಯಿಸಿದ್ದಾರೆ.
 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !