ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮತ್ತು ಜೇಟ್ಲಿಗೆ ಅರ್ಥಶಾಸ್ತ್ರ ಗೊತ್ತಿಲ್ಲ: ಸುಬ್ರಮಣಿಯನ್ ಸ್ವಾಮಿ

Last Updated 23 ಮಾರ್ಚ್ 2019, 16:10 IST
ಅಕ್ಷರ ಗಾತ್ರ

ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿಗೆ ಅರ್ಥಶಾಸ್ತ್ರ ಗೊತ್ತಿಲ್ಲ.ಹಾಗಾಗಿ ಅವರು ಭಾರತದ ಆರ್ಥಿಕತೆಯು ವಿಶ್ವದಲ್ಲಿ 5ನೇ ಅತಿದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರ ಎಂದು ಹೇಳುತ್ತಿದ್ದಾರೆ.ಆದರೆ ನಿಜವಾಗಿಯೂ ಭಾರತ 3ನೇ ಅತಿದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರವಾಗಿದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಜಿಡಿಪಿ ಲೆಕ್ಕಾಚಾರದ ಪ್ರಕ್ರಿಯೆಗಳನ್ನು ನೋಡಿದರೆ ಅಮೆರಿಕಮತ್ತು ಚೀನಾದ ನಂತರ ಭಾರತ ಅತಿದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರವಾಗಿದೆ.

ನಮ್ಮ ದೇಶ ವಿಶ್ವದಲ್ಲಿ 5ನೇ ಅತಿದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರ ಎಂದು ಪ್ರಧಾನಿ ಯಾಕೆ ಹೇಳುತ್ತಿದ್ದಾರೆ ಎಂಬುದು ನನಗೆ ಗೊತ್ತಾಗುತ್ತಿಲ್ಲ.ಯಾಕೆಂದರೆ ಅವರಿಗೆ ಅರ್ಥ ಶಾಸ್ತ್ರ ಗೊತ್ತಿಲ್ಲ. ನಮ್ಮ ವಿತ್ತ ಸಚಿವರಿಗೂ ಅರ್ಥ ಶಾಸ್ತ್ರ ಗೊತ್ತಿಲ್ಲ ಎಂದಿದ್ದಾರೆ ಸ್ವಾಮಿ.

ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್‍ಡಿ ಪಡೆದಿರುವ ಸ್ವಾಮಿ, ಅಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿದ್ದರು.

ವಿನಿಮಯ ದರದ ಆಧಾರದಲ್ಲಿ ಲೆಕ್ಕಹಾಕಿದರೆ ಭಾರತ 5ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿದೆ. ವಿನಿಮಯ ದರಗಳು ಬದಲಾಗುತ್ತಾ ಇರುತ್ತದೆ.ಹಾಗೆ ಲೆಕ್ಕ ನೋಡಿದರೆ ಪ್ರಸ್ತುತ ಭಾರತ 7ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿದೆ.

ಎಂಗೇಜಿಂಗ್ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಎಂಬ ಕಾರ್ಯಕ್ರಮವನ್ನುದ್ದೇಶಿಸಿಮಾತನಾಡಿದ ಸ್ವಾಮಿ, ವಸಾಹತುಶಾಹಿ ಬರುವ ಮುನ್ನ ಭಾರತ ಮತ್ತು ಚೀನಾ ಕ್ರಮವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗಿದ್ದವು.ನಾವು ನೆಹರೂ ಮಾಡಿದಂತೆ ಚೀನಾಕ್ಕೆ ಒಂದೆಡೆ ಪ್ರೋತ್ಸಾಹ ನೀಡಿ ಇನ್ನೊಂದೆಡೆ ಹಗೆತನ ಸಾಧಿಸುವ ಮೂಲಕ ಡೋಲಾಯಮಾನ ಮಾಡಬಾರದು.ನಾವು ಸಾಮಾನ್ಯ ಅಂಗಣವೊಂದನ್ನು ಕಂಡುಕೊಳ್ಳಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT