ಅಮೇಠಿಯ ಜನರು ಹೊಸ ಇತಿಹಾಸ ಬರೆಯಲಿದ್ದಾರೆ: ನರೇಂದ್ರ ಮೋದಿ

ಭಾನುವಾರ, ಮಾರ್ಚ್ 24, 2019
32 °C

ಅಮೇಠಿಯ ಜನರು ಹೊಸ ಇತಿಹಾಸ ಬರೆಯಲಿದ್ದಾರೆ: ನರೇಂದ್ರ ಮೋದಿ

Published:
Updated:

ಅಮೇಠಿ: 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಇದೇ ಪ್ರಥಮ ಬಾರಿ ಅಮೇಠಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಕೌಹಾರ್‌ನಲ್ಲಿ ಕಲಾಷ್ನಿಕೋವ್‌ ರೈಫಲ್‌ ತಯಾರಿಸುವ ಕಾರ್ಖಾನೆಯನ್ನು ಮೋದಿ ಉದ್ಘಾಟಿಸಿ, ಹಲವು  ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್‍ಗೆ ಅಮೇಠಿ ಉತ್ತಮ ಉದಾಹರಣೆ. ನನಗೆ ಮತ ನೀಡಿದವರೂ, ಮತ ನೀಡದೇ ಇದ್ದವರು ಎಲ್ಲರೂ ನನ್ನವರೇ ಎಂದಿದ್ದಾರೆ.

ಮೋದಿ ಭಾಷಣದ ಮುಖ್ಯಾಂಶಗಳು 

 ಕೆಲವು ಜನರು ಜಗತ್ತು ಸುತ್ತಾಡುತ್ತಾ  ಮೇಡ್ ಇನ್ ಉಜ್ಜೈನ್, ಮೇಡ್ ಇನ್ ಜೈಪುರ್, ಮೇಡ್ ಇನ್ ಜೈಸಲ್ಮೇರ್ ಎಂದು ಹೇಳಿ ಭಾಷಣ ಮಾಡುತ್ತಾರೆ. ಅವರ ಮಾತುಗಳು ಭಾಷಣದಲ್ಲಿಯೇ ಉಳಿದಿರುತ್ತದೆ. ಇದು ಮೋದಿ, ಇನ್ನು ಮುಂದೆ ಮೇಡ್ ಇನ್ ಅಮೇಠಿ AK-203 ರೈಫಲ್ ಇರುತ್ತದೆ.

ನಾವು ಇಲ್ಲಿ ಚುನಾವಣೆ ಸೋತಿರಬಹುದು ಆದರೆ ನಿಮ್ಮ ಮನಸ್ಸು ಗೆದ್ದಿದ್ದೇವೆ. ಕಳೆದ 5 ವರ್ಷಗಳಲ್ಲಿ ಇಲ್ಲಿನ ಅಭಿವೃದ್ಧಿಗಾಗಿ ಸ್ಮೃತಿ ಇರಾನಿ ಕಷ್ಟಪಟ್ಟು ದುಡಿದಿದ್ದಾರೆ. ನೀವು ಆಕೆಯನ್ನು ಸೋಲಿಸಿದ್ದೀರಾ ಅಥವಾ ಗೆಲ್ಲಿಸಿದ್ದೀರಾ ಎಂಬುದನ್ನು ನೋಡದೆಯೇ ಅವರು ಕೆಲಸಮಾಡಿದ್ದಾರೆ.ಇಲ್ಲಿ ಗೆದ್ದವರು ಕೂಡಾ ಅಷ್ಟು ಕೆಲಸ ಮಾಡಿರಲಿಕ್ಕಿಲ್ಲ.
 

ಮತ ಪಡೆದ ನಂತರ ಮತದಾರರನ್ನು ಮರೆಯುವ ಅಭ್ಯಾಸ ಕೆಲವರಿಗಿದೆ. ಅಂಥವರು ಬಡವರನ್ನು ಬಡತನದಲ್ಲಿಯೇ ಇರುವಂತೆ ಮಾಡುತ್ತಾರೆ. ಇಲ್ಲವಾದರೆ ಪ್ರತಿ ಪೀಳಿಗೆಯಲ್ಲಿಯೂ ಅವರು ಗರೀಬಿ ಹಠಾವೋ (ಬಡತನ ತೊಲಗಿಸಿ) ಎಂದು ಹೇಳುವುದಾದರೂ ಹೇಗೆ.  ಬಡತನದಿಂದ ಹೊರಬರುವುದಕ್ಕೆ ನಾವು ಬಡವರಿಗೆ ಸಹಾಯ ಮಾಡುತ್ತಿದ್ದೇವೆ.

* ಚುನಾವಣೆ ಫಲಿತಾಂಶದ ಆಧಾರದಲ್ಲಿ ನಾನು ಯಾವುದೇ ತಾರತಮ್ಯ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಇಲ್ಲಿಗೆ  ಯಾವ ನಾಯಕರು ಬಂದಿದ್ದಾರೆ ಎಂಬುದರ ಮೇಲೆ ಅಲ್ಲ ,ಇಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ ಅಮೇಠಿ ಹೆಸರು ಗಳಿಸುತ್ತದೆ.

* ಭಯೋತ್ಪಾದನೆ ಮತ್ತು ನಕ್ಸಲ್ ವಿರುದ್ದ ಹೋರಾಡುವ ನಮ್ಮ ಸೇನೆಗೆ ಮೇಡ್ ಇನ್ ಅಮೇಠಿ,  AK-203 ರೈಫಲ್  ತುಂಬಾ ಸಹಕಾರಿ ಆಗಲಿದೆ.

* ಅಮೇಠಿ ಫ್ಯಾಕ್ಟರಿಯಲ್ಲಿ ಯಾವ ಆಯುಧಗಳನ್ನು ತಯಾರಿಸಬಹುದು ಎಂದು ಈ ಹಿಂದಿನ ಸರ್ಕಾರ ನಿರ್ಧರಿಸಿರಲಿಲ್ಲ 

* ಬುಲೆಟ್ ಪ್ರೂಫ್ ಜಾಕೆಟ್ ಇಲ್ಲದೆಯೇ ನಮ್ಮ ಭದ್ರತಾ ಸಿಬ್ಬಂದಿಗಳು ಶತ್ರುಗಳನ್ನು ಎದುರಿಸಬೇಕಿತ್ತು. 

* ಈ ಯೋಜನೆ ಸಾಧ್ಯವಾಗಲು ಸಹಾಯ ಮಾಡಿದ ನನ್ನ ಸ್ನೇಹಿತ ವ್ಲಾಡಿಮಿರ್‌ ಪುಟಿನ್ ಅವರಿಗೆ ನಾನು  ಧನ್ಯವಾದ ಅರ್ಪಿಸುತ್ತೇನೆ.

* ಅಮೇಠಿಯಲ್ಲಿ ದೊಡ್ಡ ದೊಡ್ಡ ಭರವಸೆಗಳನ್ನು ನೀಡಲಾಗಿತ್ತು, ಆದರೆ ಅವರು ಅದನ್ನು ಈಡೇರಿಸಿಲ್ಲ.

* ಸೈಕಲ್ ಫ್ಯಾಕ್ಟರಿಗಾಗಿ ಭೂಸ್ವಾಧೀನ ನಡೆಸಿ ಆಮೇಲೆ ಅವರವರ ಜನಕ್ಕೆ ಅದನ್ನು ವರ್ಗಾವಣೆ ಮಾಡಲಾಗಿತ್ತು.

* ಎನ್‍ಡಿಎ ಅಧಿಕಾರವಧಿಯಲ್ಲಿ ಅಮೇಠಿಯ ಜನರಿಗೆ ಉಚಿತ ಗ್ಯಾಸ್ ಸಂಪರ್ಕ, ನೈರ್ಮಲ್ಯ ಮತ್ತು ವಸತಿ ನಿರ್ಮಾಣ ಯೋಜನೆ ನೀಡಲಾಗಿದೆ.

* ಕಳೆದ ಸರ್ಕಾರದಿಂದ ಕೇವಲ ಶೇ.20 ರೈತರಿಗಷ್ಟೇ ಫಲ ಸಿಕ್ಕಿದೆ. ಇದರಲ್ಲಿ ಮಧ್ಯವರ್ತಿಗಳ ಜೇಬಿಗೆ ಹೆಚ್ಚು ಹಣ ಹೋಗಿದೆ.

* ಅಮೇಠಿಯ ಜನರು ಹೊಸ ಇತಿಹಾಸ ಬರೆಯಲಿದ್ದಾರೆ 

ಬರಹ ಇಷ್ಟವಾಯಿತೆ?

 • 21

  Happy
 • 3

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !