ಬುಧವಾರ, ಅಕ್ಟೋಬರ್ 23, 2019
25 °C
ಸ್ವಚ್ಛತಾ ಅಭಿಯಾನ 

ವಿಡಿಯೊ|ಮಾಮಲ್ಲಪುರಂ ಸಮುದ್ರ ತೀರದಲ್ಲಿ 30 ನಿಮಿಷ ಪ್ಲಾಸ್ಟಿಕ್‌ ಕಸ ಹೆಕ್ಕಿದ ಮೋದಿ

Published:
Updated:
ಮಾಮಲ್ಲಪುರಂ ಸಮುದ್ರ ತೀರದಲ್ಲಿ ಪ್ರಧಾನಿ ನರೇಂದ್ರ ಮೋದಿ

ಮಾಮಲ್ಲಪುರಂ: ಶುಕ್ರವಾರ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರೊಂದಿಗಿನ ಅನೌಪಚಾರಿಕ ಶೃಂಗಸಭೆಯಲ್ಲಿ ಮಾತುಕತೆ ನಡೆಸಿದ್ದ ಪ್ರಧಾನಿ ಮೋದಿ, ಶನಿವಾರ ಬೆಳಿಗ್ಗೆ ಮಾಮಲ್ಲಪುರಂನಲ್ಲಿ ಸಮುದ್ರ ತೀರದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಂಡರು. 

ಸುಮಾರು 30 ನಿಮಿಷ ಸಮುದ್ರ ತೀರದಲ್ಲಿ ವಾಯುವಿಹಾರದ ಜತೆಗೆ ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ಹಾಗೂ ಇತರೆ ಕಸವನ್ನು ಚೀಲದಲ್ಲಿ ಸಂಗ್ರಹಿಸುವ ಚಟುವಟಿಕೆ(ಪ್ಲಾಗಿಂಗ್‌)ಯನ್ನು ಪ್ರಧಾನಿ ಮೋದಿ ಮಾಡಿದರು. ‘ಪ್ಲಾಗಿಂಗ್‌‘ ಎಂದರೆ, ಜಾಗಿಂಗ್‌ ಮಾಡುತ್ತ ಪ್ಲಾಸ್ಟಿಕ್‌ ಕಸವನ್ನು ಹೆಕ್ಕುವುದು.

ಅವರು ಕಸದ ಸಂಗ್ರಹದ ಚೀಲವನ್ನು ಹೊಟೇಲ್‌ ಸಿಬ್ಬಂದಿ ಜಯರಾಜ್‌ ಅವರಿಗೆ ಒಪ್ಪಿಸಿದ್ದಾಗಿ ಮೋದಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. 

ತೀರದ ಮರಳಿನ ಮೇಲೆ ಬಿದ್ದಿದ್ದ ಪ್ಲಾಸ್ಟಿಕ್‌ ಬಾಟಲಿಗಳು, ಮರಳಿನಲ್ಲಿ ಹುದುಗಿದ್ದ ಪ್ಲಾಸ್ಟಿಕ್‌ ಚೀಲಗಳು ಹಾಗೂ ಚಪ್ಪಲಿ ಎಳೆದು ತೆಗೆದು ದೊಡ್ಡ ಪ್ಲಾಸ್ಟಿಕ್‌ ಚೀಲದೊಳಗೆ ತುಂಬಿಕೊಳ್ಳುತ್ತ ನಡೆದರು. ವಾಕಿಂಗ್‌ ಜತೆಗೆ ಕಸವನ್ನು ಸಂಗ್ರಹಿಸುತ್ತ ತುಂಬಿದ ಚೀಲವನ್ನು ಹೆಗಲ ಮೇಲೆ ಹೊತ್ತು ಹೊಟೇಲ್‌ ಸಿಬ್ಬಂದಿಗೆ ನೀಡಿದ್ದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. 

’ನಮ್ಮ ಸಾರ್ವಜನಿಕ ಸ್ಥಳಗಳು ಶುಚಿಯಾಗಿರುವಂತೆ ಗಮನಿಸಿಕೊಳ್ಳಬೇಕು ಹಾಗೇ ನಮ್ಮ ಆರೋಗ್ಯವನ್ನು ದೃಢವಾಗಿರಿಸಿಕೊಳ್ಳಬೇಕು‘ ಎಂಬ ಸಂದೇಶ ನೀಡಿದ್ದಾರೆ. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)