ಬಾಲಾಕೋಟ್ ದಾಳಿಯಿಂದ ಪಾಕ್ ಜನರಿಗೆ ನೋವಾಗುವುದಕ್ಕಿಂತ ಹೆಚ್ಚು ನೋವಾಗಿದ್ದು ದೀದಿಗೆ

ಸೋಮವಾರ, ಏಪ್ರಿಲ್ 22, 2019
31 °C

ಬಾಲಾಕೋಟ್ ದಾಳಿಯಿಂದ ಪಾಕ್ ಜನರಿಗೆ ನೋವಾಗುವುದಕ್ಕಿಂತ ಹೆಚ್ಚು ನೋವಾಗಿದ್ದು ದೀದಿಗೆ

Published:
Updated:

ಕೊಲ್ಕತ್ತ: ಪಾಕಿಸ್ತಾನದ ಬಾಲಾಕೋಟ್‍ನಲ್ಲಿ ಭಾರತೀಯ ವಾಯುಪಡೆ ವಾಯುದಾಳಿ ನಡೆಸಿದಾಗ ನೋವಾಗಿದ್ದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ತನ್ನ ವಿರುದ್ಧ ಹೋರಾಡಲು ವಿಪಕ್ಷಗಳ ಮಹಾಮೈತ್ರಿ ಮಾಡಿದರು. ನಾವು ಬಾಲಾಕೋಟ್‍ನಲ್ಲಿ ದಾಳಿ ಮಾಡಿದಾಗ ಇಲ್ಲಿರುವ ಜನರಿಗೆ ನೋವಾಯಿತು. ಈ ವಾಯುದಾಳಿಯಿಂದ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯ ಜನರಿಗೆ ನೋವಾಗುವುದಕ್ಕಿಂತ ಹೆಚ್ಚು ನೋವು ದೀದಿಗೆ ಆಗಿದೆ. ನಾವು ಪಾಕ್  ಗಡಿಭಾಗಕ್ಕೆ ನುಗ್ಗಿ ಹೊಡೆದುಹಾಕಿದೆವು. ಆದರೆ ದೀದಿಗೆ ಇದು ಇಷ್ಟವಾಗಲಿಲ್ಲ.ಅವರಿಗೆ ಮಾತ್ರವಲ್ಲ ಮಹಾಮೈತ್ರಿಯ ನಾಯಕರಿಗೂ ನೋವಾಗಿತ್ತು. ಅವರೆಷ್ಟು ಜೋರಾಗಿ ಘೋಷಣೆ ಕೂಗಿದರೆಂದರೆ ಅವರು ಪಾಕಿಸ್ತಾನದಲ್ಲಿ ಹೀರೋಗಳಾಗಿ ಬಿಟ್ಟರು.

ಸೇನಾ ಕಾರ್ಯಾಚರಣೆಗಳ ಬಗ್ಗೆ  ಪ್ರಶ್ನಿಸುವ ಮೂಲಕ ವಿಪಕ್ಷಗಳು ಸೇನೆಯ ಆತ್ಮವಿಶ್ವಾಸವನ್ನು ಕಡಿಮೆಗೊಳಿಸಲು ಯತ್ನಿಸುತ್ತಿವೆ. ನಮ್ಮ ಸಶಸ್ತ್ರ ಪಡೆಯ ಆತ್ಮವಿಶ್ವಾಸವನ್ನು ಕುಗ್ಗಿಸುವ ಕುತಂತ್ರ ನಡೆಯುತ್ತಿದೆ. ನೀವು ಈ ಕುತಂತ್ರವನ್ನು ವ್ಯರ್ಥಗೊಳಿಸಲು ಬಯಸುತ್ತೀರಾ?  ನಮ್ಮ ಸಶಸ್ತ್ರ ಪಡೆಗಳಿಗೆ ಗೌರವ ನೀಡುವುದಕ್ಕಾಗಿ ನೀವು ಈ ಬಾರಿ ಮತ ಚಲಾಯಿಸಬೇಕು ಎಂದಿದ್ದಾರೆ ಮೋದಿ.

ಪುಲ್ವಾಮಾ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ನಾವು ಬಾಲಾಕೋಟ್‌ನಲ್ಲಿ ವಾಯುದಾಳಿ ನಡೆಸಿದೆವು. ಈ  ಬಗ್ಗೆ ನಿಮಗೆ ಖುಷಿ ಇಲ್ಲವೇ? ನೀವು ಹೆಮ್ಮೆಯಿಂದ ತಲೆ ಎತ್ತಿಲ್ಲವೇ? ಹೆಮ್ಮೆಯಿಂದ ನಿಮ್ಮ ಎದೆಯುಬ್ಬಿಲ್ಲವೇ? ಎಂದು ಮೋದಿ ಕೇಳಿದ್ದಾರೆ.

ಕಾಂಗ್ರೆಸ್‍ನ ಪ್ರಣಾಳಿಕೆ ಬಗ್ಗೆ ಉಲ್ಲೇಖಿಸಿದ ಮೋದಿ,  ಕಾಂಗ್ರೆಸ್ ಪಕ್ಷವು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ರದ್ದು ಮಾಡುತ್ತೇವೆ ಎಂದಿದೆ. ಈ ಮೂಲಕ ಕಾಂಗ್ರೆಸ್, ಕಲ್ಲು ತೂರಾಟ ಮಾಡುವ, ಕಾಶ್ಮೀರದ ಉಗ್ರ ವಿರುದ್ಧ ಕ್ರಮ ಕೈಗೊಳ್ಳದಂತೆ ಯೋಧರ ಕೈ ಕಟ್ಟಿ ಹಾಕುತ್ತಿದೆ.

ನಮ್ಮ ಸೇನಾ ಪಡೆಗಳು ಸಮರ್ಥವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲಿ ಎಂಬ ಕಾರಣದಿಂದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ತರಲಾಗಿತ್ತು. ಕಾಂಗ್ರೆಸ್‍ನವರಿಗೆ ನಮ್ಮ ಕಾನೂನು ಮೇಲೆ ನಂಬಿಕೆ ಇಲ್ಲ. ಆದ್ದರಿಂದಲೇ ಅವರು ಈ ರೀತಿಯ ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !