ನವದೆಹಲಿ: ಯಾವಾಗಲೂ ಬಿಜೆಪಿಯನ್ನುಒಂದು ಕೋಮುವಾದಿ ಪಕ್ಷ ಎಂದು ಪರಿಗಣಿಸಲಾಗಿದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಬಿಜೆಪಿ ಯಾವಾಗಲೂ ಒಂದು ಕೋಮುವಾದಿ ಪಕ್ಷ ಎಂದು ಹೇಳಿದ್ದಾರೆ. 1998 ರಿಂದ 2009ರ ವರೆಗೂ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಎನ್‌ಡಿಎ ಮೈತ್ರಿ ಕೂಟದಲ್ಲಿತ್ತು.
2009ರಲ್ಲಿ ನಡೆದ ಕಂದಮಹಲ್ ಘಟನೆಗೆ ಬಿಜೆಪಿ ಕೋಮವಾದದಬಣ್ಣ ಹಚ್ಚಲು ಯತ್ನಿಸಿದಕ್ಕೆನಾವು ಎನ್‌ಡಿಎ ಮೈತ್ರಿಕೂಟದಿಂದ ಹೊರ ಬಂದೆವು ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ. ಕೇಂದ್ರದಲ್ಲಿ ವಾಜಪೇಯಿ ಸರ್ಕಾರಕ್ಕೆ ಬಿಜೆಡಿಬೆಂಬಲ ನೀಡಿತ್ತು. ನಾವು ಎನ್‌ಡಿಎ ಮೈತ್ರಿಕೂಟವನ್ನು 11 ವರ್ಷ ಬೆಂಬಲಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ಕೋಮುವಾದಿತನಕ್ಕೆಬೇಸತ್ತು ಆ ಪಕ್ಷದ ಜೊತೆಗಿನ ಮೈತ್ರಿಯನ್ನು ಕಳೆದುಕೊಳ್ಳಲಾಗಿದೆ. ಅದು ಯಾವಾಗಲೂ ಕೋಮುವಾದಿ ಪಕ್ಷ ಎಂದು ನವೀನ್ ಪಟ್ನಾಯಕ್ ಪುನರುಚ್ಚರಿಸಿದರು.
ಒಡಿಶಾದಲ್ಲಿ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆ ಏಕ ಕಾಲಕ್ಕೆ ನಡೆಯಲಿದ್ದು ನಾಲ್ಕು ಹಂತಗಳಲ್ಲಿ ಮತದಾನ ನಡೆಯಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಡಿ 21 ಸ್ಥಾನಗಳ ಪೈಕಿ 20ರಲ್ಲಿ ಗೆಲುವು ದಾಖಲಿಸಿತ್ತು. 72 ವರ್ಷದ ನವೀನ್ ಪಟ್ನಾಯಕ್ ಮತ್ತೊಮ್ಮೆ ಬಿಜೆಡಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.
ಒಡಿಶಾದಲ್ಲಿ ಬಿಜೆಡಿಗೆ ಬಿಜೆಪಿ ಪ್ರಬಲ ಪೈಪೋಟಿ ನೀಡುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.