ಪ್ರತಿಪಕ್ಷಗಳಲ್ಲಿ ನಾಯಕರೂ ಇಲ್ಲ, ನೀತಿಯೂ ಇಲ್ಲ: ಬಿಜೆಪಿ ವಾಗ್ದಾಳಿ

7

ಪ್ರತಿಪಕ್ಷಗಳಲ್ಲಿ ನಾಯಕರೂ ಇಲ್ಲ, ನೀತಿಯೂ ಇಲ್ಲ: ಬಿಜೆಪಿ ವಾಗ್ದಾಳಿ

Published:
Updated:

ನವದೆಹಲಿ: ಪ್ರತಿಪಕ್ಷಗಳಲ್ಲಿ ಸರಿಯಾದ ನಾಯಕನಾಗಲೀ, ನೀತಿಯುಆ ಅಥವಾ ಚುನಾವಣಾ ತಂತ್ರವಾಗಲೀ ಇಲ್ಲ. ನರೇಂದ್ರ ಮೋದಿ ಅವರನ್ನು ತಡೆಯಬೇಕು ಎಂಬುದಷ್ಟೇ ಪ್ರತಿಪಕ್ಷಗಳ ಉದ್ದೇಶವಾಗಿದೆ ಎಂಬ ಮಾತುಗಳು ಭಾನುವಾರ ನಡೆದ ಎರಡನೇ ದಿನದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರತಿಧ್ವನಿಸಿದವು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಲು ರೂಪಿಸಿರುವ ರಾಜಕೀಯ ನಿರ್ಣಯಗಳನ್ನು ಗೃಹ ಸಚಿವ ರಾಜನಾಥ್‌ ಸಿಂಗ್‌ ಸಭೆಯಲ್ಲಿ ಪ್ರಸ್ತುತಪಡಿಸಿದರು. ‌ತನ್ನ ಹಳೆ ಘೋಷವಾಕ್ಯವಾದ ‘2022ಕ್ಕೆ ಹೊಸ ಭಾರತ’ ಕಟ್ಟುವ ಮಾತನ್ನು ಸಭೆಯಲ್ಲಿ ಪುನರುಚ್ಛರಿಸಲಾಯಿತು. ಬಿಜೆಪಿ ಪಕ್ಷವನ್ನು ಮಣಿಸುತ್ತೇವೆ ಎನ್ನುವ ಪ್ರತಿಪಕ್ಷಗಳ ಯೋಜನೆ ‘ಹಗಲು ಕನಸು’ ಎಂದೂ ಬಿಜೆ‍ಪಿ ಹೇಳಿದೆ. 

ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌, ‘ನಾಲ್ಕು ವರ್ಷಗಳ ಅಧಿಕಾರದ ನಂತರವೂ ಪ್ರಧಾನಿ ನರೇಂದ್ರ ಮೋದಿ ಪ್ರಭಾವಶಾಲಿ ನಾಯಕರ ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಬಿಜೆಪಿ ಆಡಳಿತಕ್ಕೆ ಬಂದ ನಂತರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. 2022ಕ್ಕೆ ಹೊಸ ಭಾರತ ನಿರ್ಮಾಣವಾಗಲಿದೆ’ ಎಂದು ಹೇಳಿದರು.

‘ನಮ್ಮ ಸರ್ಕಾರಕ್ಕೆ ಸರಿಯಾದ ಗುರಿಯಿದೆ, ಕೆಲಸ ಮಾಡಬೇಕೆನ್ನುವ ಉತ್ಸಾಹವಿದೆ ಮತ್ತು ಭವಿಷ್ಯದ ಭಾರತದ ಬಗ್ಗೆ ಕಲ್ಪನೆಯಿದೆ. 2022ರ ವೇಳೆಗೆ ಭಾರತದಲ್ಲಿ ಭಯೋತ್ಪಾದನೆ, ನಕ್ಸಲ್‌ ಚಟುವಟಿಕೆ ಸೇರಿದಂತೆ ಕಾಶ್ಮೀರ ಸಮಸ್ಯೆಗಳಿಗೆ ಮುಕ್ತಿ ಹಾಡುತ್ತೇವೆ’ ಎಂದು ತಿಳಿಸಿದರು.

‘2014 ಲೋಕಸಭೆ ಚುನಾವಣೆಯಲ್ಲಿ 543ರಲ್ಲಿ 282 ಸೀಟುಗಳನ್ನು ನಮ್ಮ ಪಕ್ಷ ಪಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಅದಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುವ ಮೂಲಕ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದೇವೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !