ಭಾನುವಾರ, ಆಗಸ್ಟ್ 25, 2019
27 °C

ಸಂಸತ್ತಿಗೆ ಹೊಸ ಕಟ್ಟಡ?

Published:
Updated:
Prajavani

ನವದೆಹಲಿ (ಪಿಟಿಐ): ಸಂಸತ್‌ಗೆ ಹೊಸ ಕಟ್ಟಡ ನಿರ್ಮಿಸುವ ವಿಷಯ ಪರಿಶೀಲನೆಯಲ್ಲಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ಬಾಕಿಯಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಶನಿವಾರ ಹೇಳಿದ್ದಾರೆ. 

‘ಸಂಸದರೂ ಸೇರಿದಂತೆ ಹಲವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ಸಮಿತಿಗಳನ್ನು ರಚಿಸಲಾಗಿದೆ. ಈಗಿರುವ ಕಟ್ಟಡವನ್ನು ಆಧುನೀಕರಣಗೊಳಿಸುವ ಪ್ರಸ್ತಾವವೂ ಇದೆ’ ಎಂದು ಬಿರ್ಲಾ ಹೇಳಿದ್ದಾರೆ. 

ಪ್ರಧಾನಿ ಮೋದಿ ಅವರು ತಮ್ಮ ‘ನ್ಯೂ ಇಂಡಿಯಾ’ದಲ್ಲಿ ಸಂಸತ್ ಭವನದ ವಿಸ್ತರಣೆ ಹಾಗೂ ಆಧುನೀಕರಣ ನಿರ್ಣಯವನ್ನೂ ಸೇರ್ಪಡೆ ಮಾಡುವಂತೆ ಬಿರ್ಲಾ ಅವರು ಇತ್ತೀಚಿನ ಅಧಿವೇಶನದಲ್ಲಿ ಒತ್ತಾಯಿಸಿದ್ದರು. 

‘ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಸಂಸತ್ ಭವನವೂ ಭವ್ಯ ಮತ್ತು ಆಕರ್ಷಕವಾಗಿ ಇರಬೇಕೆಂಬುದು ನಮ್ಮೆಲ್ಲರ ಬಯಕೆ’ ಎಂದು ಬಿರ್ಲಾ ಹೇಳಿದ್ದರು.

Post Comments (+)