ನೀರವ್ ಮೋದಿಗೆ ಗುಂಪು ದಾಳಿ ಭೀತಿ!

7
ನ್ಯಾಯಾಲಯಕ್ಕೆ ಮಾಹಿತಿ ನೀಡಿದ ವಕೀಲ

ನೀರವ್ ಮೋದಿಗೆ ಗುಂಪು ದಾಳಿ ಭೀತಿ!

Published:
Updated:
Deccan Herald

ಮುಂಬೈ: ಬಹುಕೋಟಿ ಪಿಎನ್‌ಬಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ನೀರವ್ ಮೋದಿ ಅವರನ್ನು ‘ರಾವಣ’ನಿಗೆ ಹೋಲಿಸಲಾಗುತ್ತಿದ್ದು, ಭಾರತಕ್ಕೆ ಮರಳಿದರೆ ತಮ್ಮ ಮೇಲೆ ‘ಗುಂಪು ದಾಳಿ’ ನಡೆಯಬಹುದೆಂಬ ಭೀತಿ ಅವರಿಗಿದೆ; ಹೀಗಾಗಿ ಅವರು ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ’ ಎಂದು ಅವರ ವಕೀಲ ವಿಜಯ್ ಅಗರವಾಲ್ ನ್ಯಾಯಾಲಯಕ್ಕೆ ತಿಳಿಸಿದರು. 

ಆದರೆ ಇದನ್ನು ಅಲ್ಲಗಳೆದ ಜಾರಿ ನಿರ್ದೇ ಶನಾಲಯ (ಇ.ಡಿ), ‘ಅವರಿಗೆ ಭದ್ರತೆಯ ಭೀತಿ ಇದ್ದರೆ ಪೊಲೀಸರಲ್ಲಿ ದೂರು ದಾಖಲಿಸಬೇಕಿತ್ತು. ಈ ಅಂಶ ಪ್ರಕರಣಕ್ಕೆ ಅಸಂಬದ್ಧವಾದದ್ದು’ ಎಂದು ಹೇಳಿದೆ. 

ನ್ಯಾಯಾಧೀಶ ಎಂ.ಎಸ್. ಅಜ್ಮಿ ಅವರು ಈ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ವೇಳೆ, ನೀರವ್ ಪರ ವಾದ ಮಂಡಿಸಿದ ವಿಜಯ್ ‘ಅವರ ಬಳಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ದಾಖ ಲೆಗಳಿಲ್ಲ’ ಎಂದು ತಿಳಿಸಿದರು. 

‘ನನ್ನ ಎಲ್ಲ ಹಣಕಾಸು ವ್ಯವಹಾರವನ್ನೂ ನೋಡಿಕೊಳ್ಳುತ್ತಿದ್ದ ನನ್ನ ಉದ್ಯೋಗಿಗಳು ಈಗಾಗಲೇ ತನಿಖಾ ಸಂಸ್ಥೆಯ ವಶದಲ್ಲಿದ್ದಾರೆ. ನನ್ನ ಎಲ್ಲ ಮಾಹಿತಿ ಮೂಲಗಳನ್ನೂ ಈಗಾಗಲೇ ವಶಕ್ಕೆ ಪಡೆದಿರುವ ಅವರು, ನನ್ನಿಂದ ಇನ್ಯಾವ ತನಿಖೆ ನಡೆಸುತ್ತಾರೆ’ ಎಂಬ ಮೋದಿ ಅವರ ಹೇಳಿಕೆಯನ್ನು ಅಗರ್‌ವಾಲ್‌ ಉಲ್ಲೇಖಿಸಿದರು. ‘ನೀರವ್ ಅವರು ಸಮನ್ಸ್, ಇ ಮೇಲ್‌ಗಳನ್ನು ಸ್ವೀಕರಿಸಿದ್ದರೂ ಪ್ರಕರಣದ ವಿಚಾರಣೆಗೆ ಸಹಕರಿಸಲು ನಿರಾಕರಿಸಿದ್ದಾರೆ’ ಎಂದು ಇ.ಡಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !