‘ಪಿಯುಸಿ’ ಇಲ್ಲದ ವಾಹನಗಳಿಗೆ ವಿಮೆಯೂ ಇಲ್ಲ!

7
ಭಾರತೀಯ ವಿಮೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಠಿಣ ನಿರ್ಧಾರ

‘ಪಿಯುಸಿ’ ಇಲ್ಲದ ವಾಹನಗಳಿಗೆ ವಿಮೆಯೂ ಇಲ್ಲ!

Published:
Updated:

ನವದೆಹಲಿ: ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಹೊಂದಿಲ್ಲದ ವಾಹನಗಳಿಗೆ ವಿಮಾ ಸೌಲಭ್ಯ ಕಲ್ಪಿಸದಿರಲು ಭಾರತೀಯ ವಿಮೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ನಿರ್ಧರಿಸಿದೆ.

ಮಾಲಿನ್ಯ ನಿಯಂತ್ರಣ ನಿಯಮ ಪಾಲಿಸದ ವಾಹನಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದೆ. ಮಾನ್ಯತಾ ಪ್ರಮಾಣಪತ್ರ ಹೊಂದಿಲ್ಲದ ಯಾವುದೇ ವಾಹನಗಳಿಗೆ ವಿಮೆ ಸೌಲಭ್ಯ ಕಲ್ಪಿಸಬಾರದು ಎಂದು ಪ್ರಾಧಿಕಾರವು ಎಲ್ಲ ವಿಮಾ ಕಂಪನಿಗಳಿಗೆ ನಿರ್ದೇಶನ ನೀಡಿದೆ.

ವಾಹನಗಳಿಗೆ ಪ್ರತಿ ವರ್ಷ ವಿಮೆ ನವೀಕರಿಸಬೇಕಾದ ನಿಯಮ ದೇಶದಲ್ಲಿ ಜಾರಿಯಲ್ಲಿದೆ. ಸುಪ್ರೀಂ ಕೋರ್ಟ್‌ ಕಳೆದ ಆಗಸ್ಟ್‌ನಲ್ಲಿ ಎಂ.ಸಿ.ಮೆಹ್ತಾ ವರ್ಸಸ್‌ ಕೇಂದ್ರ ಸರ್ಕಾರ ಮತ್ತು ಇತರರ ಪ್ರಕರಣದಲ್ಲಿ ನವೀಕರಣದ ದಿನಾಂಕಕ್ಕೆ ಪಿಯುಸಿ ಪ್ರಮಾಣ ಪತ್ರ ಹೊಂದಿಲ್ಲದ ವಾಹನಗಳಿಗೆ ವಿಮೆ ಸೌಲಭ್ಯ ನೀಡಬಾರದೆಂದು ಆದೇಶ ನೀಡಿತ್ತು. ವಿಮಾ ಕಂಪನಿಗಳು ಸುಪ್ರೀಂಕೋರ್ಟ್‌ ಆದೇಶ ಪಾಲಿಸಬೇಕಾಗಿದೆ.

ವಾಹನ ಮಾಲೀಕರು ಮಾಲಿನ್ಯ ಹೊರಸೂಸುವಿಕೆ ನಿಯಮಗಳಿಗೆ ಅನುಸಾರವಾಗಿ ಪಿಯುಸಿ ಪ್ರಮಾಣ ಪತ್ರ ಹೊಂದುವುದು ಕಡ್ಡಾಯವಾಗಿದೆ. ಇಂತಹ ಪ್ರಮಾಣ ಪತ್ರ ಹೊಂದಿಲ್ಲದ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆ ಅನುಸಾರ ಕ್ರಮ ತೆಗೆದುಕೊಳ್ಳಬಹುದಾಗಿದೆ.

ವಾಹನಗಳ ಮಾಲಿನ್ಯ ಹೊರಸೂಸುವಿಕೆ ಮಾನದಂಡಗಳಿಗೆ ಅನುಸಾರ ಮಾಲಿನ್ಯ ಮಟ್ಟ ಪರೀಕ್ಷಿಸಲು ಮತ್ತು ಪಿಯುಸಿ ಪ್ರಮಾಣಪತ್ರ ವಿತರಿಸಲು ಕಂಪ್ಯೂಟರೀಕೃತ ಸೌಲಭ್ಯಗಳು ಅನೇಕ ಪೆಟ್ರೋಲ್ ಬಂಕ್‌ಗಳು, ವರ್ಕ್‌ಶಾಪ್‌ಗಳಲ್ಲಿ ಈಗಾಗಲೇ ಲಭ್ಯವಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !