ಸೋಮವಾರ, ಜುಲೈ 26, 2021
24 °C

ಮಲಯಾಳಂ ಲೇಖಕಿ ಅಶಿತಾ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತ್ರಿಶ್ಯೂರ್‌,ಕೇರಳ: ಮಲಯಾಳಂನ ಪ್ರಸಿದ್ಧ ಲೇಖಕಿ ಅಶಿತಾ (63) ತ್ರಿಶ್ಯೂರ್‌ನ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

ಅಶಿತಾ ಅವರು ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರು ಕಂಡುಬಂದ ಕಾರಣ ಮಂಗಳವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

1956 ಏಪ್ರಿಲ್‌ 5ರಂದು ತ್ರಿಶ್ಯೂರ್‌ನ ಪಳಯನ್ನೂರ್‌ನಲ್ಲಿ ಅವರು ಜನಿಸಿದ್ದರು. ಸಣ್ಣಕಥೆ, ಕವನ, ಮಕ್ಕಳ ಸಾಹಿತ್ಯ ಮತ್ತು ಭಾಷಾಂತರ ಕೃತಿಗಳನ್ನು ಅಶಿತಾ ರಚಿಸಿದ್ದಾರೆ.

’ಒರು ಸ್ತ್ರೀಯುಂ ಪರಯಾತದ್‌‘, ‘ಅಪೂರ್ಣ ವಿರಾಮಂಗಳ್‌‘, ’ಅಶಿತಾಯುಡೆ ಕಥಕಳ್‌‘ ಇವು ಅಶಿತಾ ಅವರ ಪ್ರಮುಖ ಕೃತಿಗಳು.

ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಲಲಿತಾಂಬಿಕಾ ಅಂತರ್ಜನಂ ಪ್ರಶಸ್ತಿ, ಇಡಶ್ಶೇರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು