ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ: ಪತ್ಕುರಾ ವಿಧಾನಸಭೆ ಚುನಾವಣೆ ಮೇ 19ಕ್ಕೆ

Last Updated 25 ಏಪ್ರಿಲ್ 2019, 2:08 IST
ಅಕ್ಷರ ಗಾತ್ರ

ಭುವನೇಶ್ವರ: ಚುನಾವಣಾ ಆಯೋಗವು ಇಲ್ಲಿನ ಪತ್ಕುರಾ ವಿಧಾನಸಭೆ ಚುನಾವಣೆ ದಿನಾಂಕವನ್ನು ಮೇ 19ಕ್ಕೆ ಮುಂದೂಡಿದೆ. ಈ ಕ್ಷೇತ್ರದ ಚುನಾವಣೆಯು ಏಪ್ರಿಲ್‌ 29ಕ್ಕೆ ನಿಗದಿಯಾಗಿತ್ತು. ಇಲ್ಲಿಂದ ಕಣಕ್ಕಿಳಿದಿದ್ದ ಬಿಜೆಡಿ ಅಭ್ಯರ್ಥಿ ಪ್ರಕಾಶ್‌ ಅಗರ್‌ವಾಲ್‌ ಅವರು ಮೃತಪಟ್ಟಿದ್ದರಿಂದ ಚುನಾವಣಾ ದಿನಾಂಕ ಬದಲಿಸಲಾಗಿದೆ.

ಮೇ 1 ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಎಂದುಆಯೋಗವು ಘೋಷಿಸಿದೆ.

‘ಬಿಜೆಡಿ ಅಭ್ಯರ್ಥಿ ಪ್ರಕಾಶ್‌ ಅಗರ್‌ವಾಲ್‌ ಅವರ ನಿಧನದಿಂದಾಗಿ ಪತ್ಕುರಾ ವಿಧಾನಸಭೆ ಚುನಾವಣೆ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿತ್ತು. ಇದೀಗ ಚುನಾವಣಾ ಆಯೋಗದ ಆದೇಶದ ಮೇರೆಗೆ ಪ್ರಕ್ರಿಯೆ ನಡೆಯುತ್ತಿದ್ದು, ಬಿಜೆಡಿಯು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು’ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಸುರೇಂದ್ರ ಕುಮಾರ್‌ ತಿಳಿಸಿದ್ದಾರೆ.

‘ನಾಮಪತ್ರ ಸಲ್ಲಿಕೆಗೆ ಮೇ 1 ಕೊನೆ ದಿನವಾಗಿದ್ದು, ಈ ಹಿಂದೆ ನಿಗದಿಯಾಗಿರುವಂತೆ ಮೇ 23ರಂದು ಮತ ಎಣಿಕೆ ಕಾರ್ಯ ನಡೆಯಲಿದೆ’ ಎಂದೂ ತಿಳಿಸಿದ್ದಾರೆ.

ಹಿರಿಯ ನಾಯಕರಾಗಿದ್ದ ಅಗರ್‌ವಾಲ್‌ 2009 ಹಾಗೂ 2014ರಲ್ಲಿ ಎರಡು ಬಾರಿ ಪತ್ಕುರಾ ಕ್ಷೇತ್ರದಿಂದ ಶಾಸಕರಾಗಿ ಆಯ‌್ಕೆಯಾಗಿದ್ದರು. ಕೇಂದ್ರಪುರ ವಿಧಾನಸಭೆ ಕ್ಷೇತ್ರದಿಂದಲೂ 4ಬಾರಿ ಶಾಸಕರಾಗಿದ್ದ ಅವರು ಚಿಕಿತ್ಸೆಗಾಗಿ ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಮೃತಪಟ್ಟಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT