ಭಾನುವಾರ, ಡಿಸೆಂಬರ್ 8, 2019
21 °C
ಕೇಂದ್ರ ಸಚಿವ ಹೇಳಿಕೆ

‘ಒಂದು ದೇಶ, ಒಂದು ಪಡಿತರ’ ಜೂನ್‌ನಿಂದ ರಾಷ್ಟ್ರವ್ಯಾಪಿ ಜಾರಿ: ಸಚಿವ ರಾಮವಿಲಾಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಒನ್‌ ನೇಷನ್‌ ಒನ್‌ ರೇಷನ್‌ ಕಾರ್ಡ್‌’ (ಒಂದು ದೇಶ ಒಂದು ಪಡಿತರ) ಯೋಜನೆ ಬರುವ ಜೂನ್‌ನಿಂದ ದೇಶದಾದ್ಯಂತ ಜಾರಿಗೆ ಬರಲಿದೆ ಎಂದು ಕೇಂದ್ರ ಆಹಾರ ಸಚಿವ ರಾಮವಿಲಾಸ್‌ ಪಾಸ್ವಾನ್‌ ಲೋಕಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ.

ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಕೂಲಿಕಾರ್ಮಿಕರು ಒಂದೇ ಪಡಿತರ ಕಾರ್ಡ್‌ ಬಳಸಿ ಯಾವುದೇ ರಾಜ್ಯದ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಧಾನ್ಯ ಪಡೆಯಬಹುದಾಗಿದೆ.

‘ಇದೇ ಮಾದರಿಯಲ್ಲಿ ಒಂದು ದೇಶ ಒಂದು ಮಾನಕ (ಒನ್‌ ನೇಷನ್‌, ಒನ್‌ ಸ್ಟ್ಯಾಂಡರ್ಡ್‌) ಎಂಬ ಯೋಜನೆಯನ್ನು ಸಹ ಜಾರಿಗೆ ತರಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಈ ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಬ್ಯೂರೊ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್ಸ್‌ಗೆ (ಬಿಐಎಸ್‌) ಸೂಚನೆ ನೀಡಲಾಗಿದೆ’ ಎಂದೂ ಪಾಸ್ವಾನ್‌ ಸದನಕ್ಕೆ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು