ಬಾಂಗ್ಲಾ ನಟರಿಂದ ಪ್ರಚಾರಕ್ಕೆ ವಿರೋಧ

ಮಂಗಳವಾರ, ಏಪ್ರಿಲ್ 23, 2019
27 °C

ಬಾಂಗ್ಲಾ ನಟರಿಂದ ಪ್ರಚಾರಕ್ಕೆ ವಿರೋಧ

Published:
Updated:

ಕೋಲ್ಕತ್ತ: ಬಾಂಗ್ಲಾ ದೇಶದ ಜನಪ್ರಿಯ ನಟ ಫಿರ್ದೌಸ್‌ ಅಹ್ಮದ್‌ ಅವರು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪರವಾಗಿ ಪ್ರಚಾರ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ರಾಯ್‌ಗಂಜ್‌ ಲೋಕಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಕನ್ಹಯ್ಯಾಲಾಲ್‌ ಅಗರ್‌ವಾಲ್‌ ಅವರ ಪರವಾಗಿ ಬಾಂಗ್ಲಾದೇಶದ ಪ್ರಸಿದ್ಧ ನಟರಾದ ಫಿರ್ದೌಸ್‌, ಅಂಕುಶ್‌ ಮತ್ತು ಪಾಯಲ್‌ ಅವರು ರೋಡ್‌ಶೋ ನಡೆಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ರಾಜ್ಯದ ಮುಖ್ಯ ಚುನಾವಣಾಧಿಕಾರಿ ಆರಿಜ್‌ ಅಫ್ತಾಬ್‌ ಅವರನ್ನು ಭೇಟಿದ ಮಾಡಿದ ಬಿಜೆಪಿ ಮುಖಂಡರು ದೂರು ನೀಡಿದ್ದಾರೆ. 

‘ಪ್ರಚಾರಕ್ಕೆ ವಿದೇಶಿ ನಟರನ್ನು ಬಳಸಿಕೊಂಡಿರುವುದು ಕಾನೂನುಬಾಹಿರ. ಉದ್ದೇಶಪೂರ್ವಕಾಗಿಯೇ ಹೀಗೆ ಮಾಡಲಾಗಿದೆ. ಟಿಎಂಸಿಯ ದಿವಾಳಿ ರಾಜಕಾರಣಕ್ಕೆ ಇದುವೇ ಪುರಾವೆ’ ಎಂದು ಬಿಜೆಪಿ ಹೇಳಿದೆ. 

ಪ್ರವಾಸಿ ವೀಸಾದಲ್ಲಿ ಬಂದಿರುವ ಜನರು ಇಲ್ಲಿ ಚುನಾವಣಾ ಪ್ರಚಾರ ನಡೆಸುವುದು ಹೇಗೆ ಸಾಧ್ಯ? ಮುಸ್ಲಿಂ ಮತಗಳ ಧ್ರುವೀಕರಣಕ್ಕಾಗಿಯೇ ಈ ನಟರನ್ನು ಕರೆಸಿಕೊಳ್ಳಲಾಗಿದೆ ಎಂದು ಬಿಜೆಪಿ ದೂರಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !