ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯ ಭಾರತದಲ್ಲೂ ಇತ್ತು ಉಷ್ಟ್ರಪಕ್ಷಿ

Last Updated 22 ಡಿಸೆಂಬರ್ 2018, 20:16 IST
ಅಕ್ಷರ ಗಾತ್ರ

ಮುಂಬೈ: ಉಷ್ಟ್ರಪಕ್ಷಿ ಅಥವಾ ಉಷ್ಟ್ರಪಕ್ಷಿಯಂತಹ ದೊಡ್ಡ ಹಕ್ಕಿಗಳು ಭಾರತದಲ್ಲಿಯೂ ಇದ್ದವು ಎಂದು ಮಹಾರಾಷ್ಟ್ರದ ಅಮರಾವತಿಯ ಸಂಶೋಧಕ ಡಾ. ವಿ.ಟಿ. ಇಂಗೋಲ್‌ ಕಂಡುಕೊಂಡಿದ್ದಾರೆ. ಈಗ ಆಸ್ಟ್ರಿಚ್‌ಗಳು ಆಫ್ರಿಕಾದಲ್ಲಿ ಮಾತ್ರ ಇವೆ.

ಪುರಾವೆಗಳು

* ಮಹಾರಾಷ್ಟ್ರ–ಮಧ್ಯ ಪ್ರದೇಶ ಗಡಿಯಲ್ಲಿರುವ ಅಂಬಾದೇವಿ ಗುಹೆಗಳಲ್ಲಿ ಪತ್ತೆಯಾದ ಇತಿಹಾಸಪೂರ್ವ ಯುಗದ ಚಿತ್ರಗಳಲ್ಲಿ ಆಸ್ಟ್ರಿಚ್‌ ಚಿತ್ರಗಳು ಇವೆ

* ಮಹಾರಾಷ್ಟ್ರದ ನಾಗಪುರ ಮತ್ತು ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ಆಸ್ಟ್ರಿಚ್‌ನ ಮೊಟ್ಟೆಯ ಚಿಪ್ಪುಗಳು ಸಿಕ್ಕಿವೆ. ಇವು 25 ಸಾವಿರ ವರ್ಷ ಹಳೆಯವು

* ಇದರ ಡಿಎನ್‌ಎ ಆಫ್ರಿಕಾದ ಆಸ್ಟ್ರಿಚ್‌ ಡಿಎನ್‌ಎ ಜತೆಗೆ ಶೇ 92ರಷ್ಟು ಹೊಂದಾಣಿಕೆ ಆಗಿದೆ

ಇದ್ದ ಸಮಯ: 15,000ದಿಂದ 25,000 ವರ್ಷಗಳ ಹಿಂದೆ

ಭಾರತದಲ್ಲಿ ದೊಡ್ಡ ಹಕ್ಕಿಗಳು

10 ಕೋಟಿ ವರ್ಷಗಳ ಹಿಂದೆ ಗೊಂಡ್ವಾನಾ ಮೇರುಖಂಡವು ವಿಭಜನೆಗೊಂಡು ಚೆದುರಿತು. ಭರತ ಖಂಡ, ಆಫ್ರಿಕಾ, ಮಡಗಾಸ್ಕರ್‌, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕ ಖಂಡಗಳಾಗಿ ರೂಪುಗೊಂಡಿತು. ಈ ಸಮಯದಲ್ಲಿ ದಕ್ಷಿಣ ಆಫ್ರಿಕಾದ ರೀಯ, ಆಸ್ಟ್ರೇಲಿಯಾದ ಎಮು, ಆಸ್ಟ್ರಿಚ್‌ ಮತ್ತು ಆನೆ ಹಕ್ಕಿಗಳು ಭಾರತದಲ್ಲಿ ಇದ್ದವು

ದಶಕದ ಸಂಶೋಧನೆ

* ಆಸ್ಟ್ರಿಚ್‌ ಚಿತ್ರಗಳಿರುವ ಗುಹೆಗಳು 2007ರಲ್ಲಿ ಪತ್ತೆಯಾದವು. 10 ವರ್ಷಗಳ ಸಂಶೋಧನೆ ಬಳಿಕ ಭಾರತದಲ್ಲಿ ಆಸ್ಟ್ರಿಚ್‌ನಂತಹ ಪಕ್ಷಿಗಳು ಇದ್ದವು ಎಂಬ ನಿರ್ಧಾರಕ್ಕೆ ಬರಲಾಗಿದೆ.

* ಹಾರಾಡದ ಹಕ್ಕಿಗಳು ಭಾರತದಲ್ಲಿ ಯಾಕಿಲ್ಲ ಎಂಬುದು ವಿಜ್ಞಾನ ಸಮುದಾಯಕ್ಕೆ ಆಶ್ಚರ್ಯವೇನೂ ಅಲ್ಲ. ಯಾಕೆಂದರೆ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್‌ ಮತ್ತು ರಾಜಸ್ಥಾನದಲ್ಲಿ ಆಸ್ಟ್ರಿಚ್‌ನಂತಹ ದೊಡ್ಡ ಹಕ್ಕಿಗಳ ಮೊಟ್ಟೆಯ ಚಿಪ್ಪುಗಳು ದೊರೆತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT