ಮುಂಬೈ ಕಡಲಕಿನಾರೆಯಲ್ಲಿ ಜೆಲ್ಲಿ ಫಿಶ್ ಕಚ್ಚಿ 150 ಮಂದಿಗೆ ಗಾಯ

7

ಮುಂಬೈ ಕಡಲಕಿನಾರೆಯಲ್ಲಿ ಜೆಲ್ಲಿ ಫಿಶ್ ಕಚ್ಚಿ 150 ಮಂದಿಗೆ ಗಾಯ

Published:
Updated:

ಮುಂಬೈ: ಮುಂಬೈ ಕಡಲ ಕಿನಾರೆಯಲ್ಲಿ ಬ್ಲೂ ಬಾಟಲ್ ಜೆಲ್ಲಿ ಫಿಶ್ ಕಚ್ಚಿ 150 ಮಂದಿಗೆ ಗಾಯಗಳಾಗಿವೆ. ಪೋರ್ಚುಗೀಸ್ ಮ್ಯಾನ್ ಆಫ್  ವಾರ್ ಎಂದು ಕರೆಯಲ್ಪಡುವ ಈ ಬ್ಲೂ ಬಾಟಲ್ ಜೆಲ್ಲಿ ಫಿಶ್‍ಗಳು ಇಲ್ಲಿನ ಜನರಲ್ಲಿ ಆತಂಕ ಸೃಷ್ಟಿಸಿವೆ.
ಜೆಲ್ಲಿ ಫಿಶ್‍ನ ಉದ್ದದ  ಗ್ರಹಣಾಂಗ (tentacles) ಮನುಷ್ಯನ ದೇಹದೊಳಗೆ ಚುಚ್ಚಲ್ಪಟ್ಟರೆ ಗಂಟೆಗಳ ಕಾಲ ತುರಿಕೆ ಮತ್ತು ನೋವು ಇರುತ್ತದೆ. ಈ ಮೀನಿನಲ್ಲಿರುವ ವಿಷಾಂಶ ಬೇರೆ ಮೀನುಗಳನ್ನು ಕೊಲ್ಲುತ್ತದೆ. ಆದರೆ ಮನುಷ್ಯ ದೇಹಕ್ಕೆ ಹಾನಿಯನ್ನುಂಟು ಮಾಡುವುದಿಲ್ಲ.

ಬ್ಲೂ ಬಾಟಲ್ ಜೆಲ್ಲಿ ಫಿಶ್‌‍ಗಳು ಮುಂಗಾರಿನ ಮಧ್ಯ ಅವಧಿಯಲ್ಲಿ ಸಾಮಾನ್ಯವಾಗಿ ಮುಂಬೈ ಕಡಲ ಕಿನಾರೆಗಳಲ್ಲಿ ಕಾಣಸಿಗುತ್ತವೆ.

ಕಳೆದ ಎರಡು ದಿನಗಳಲ್ಲಿ ಸುಮಾರು 150 ಜನರಿಗೆ ಜೆಲ್ಲಿ ಫಿಶ್ ಕಚ್ಚಿದೆ ಎಂದು ಜುಹೂ ಬೀಚ್‍ನಲ್ಲಿರುವ ವ್ಯಾಪಾರಿಯೊಬ್ಬರು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಕಡಲ ಕಿನಾರೆಯಲ್ಲಿನ ತುಂಬಾ ಜೆಲ್ಲಿ ಫಿಶ್‍ಗಳಿವೆ. ತುಂಬಾ ಜನರಿಗೆ ಇದು ಕಚ್ಚಿ ಗಾಯಮಾಡಿದೆ. ಜೆಲ್ಲಿ  ಫಿಶ್ ಕಚ್ಚಿದ ಜಾಗಕ್ಕೆ ನಿಂಬೆಹಣ್ಣು ಉಜ್ಜಿ ನಾನು ಅವರಿಗೆ ಸಹಾಯ ಮಾಡಿದ್ದೇನೆ. ಜನರು ಈ ಹೊತ್ತಲ್ಲಿ ಬೀಚ್‍ಗೆ ಭೇಟಿ ನೀಡುವುದನ್ನು ನಿಲ್ಲಿಸಬೇಕೆಂದು ಆ  ವ್ಯಾಪಾರಿ ಹೇಳಿದ್ದಾರೆ. 

ಪ್ರತಿ ವರ್ಷವೂ ಕಡಲ ಕಿನಾರೆಯಲ್ಲಿ ಜೆಲ್ಲಿ ಫಿಶ್ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ ಎಂದಿದ್ದಾರೆ  ಇಲ್ಲಿನ ಸ್ಥಳೀಯರು.
 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !