ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಮಕ್ಕಳ ನೀತಿ ಪ್ರಸ್ತಾಪ: ಮೋಹನ್‌ ಭಾಗವತ್‌ ವಿರುದ್ಧ ಓವೈಸಿ ಕಿಡಿ

Last Updated 19 ಜನವರಿ 2020, 19:41 IST
ಅಕ್ಷರ ಗಾತ್ರ

ಹೈದರಾಬಾದ್‌: ಕುಟುಂಬವೊಂದಕ್ಕೆ ಎರಡು ಮಕ್ಕಳನ್ನು ಮಿತಿಗೊಳಿಸುವ ಕಾನೂನು ತರಬೇಕು ಎಂಬ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿಕೆಯನ್ನು ಎಐಎಂಐಎಂ ಅಧ್ಯಕ್ಷ ಅಸದುದ್ದೀನ್‌ ಓವೈಸಿ ಟೀಕಿಸಿದ್ದಾರೆ.

ನಿಜಾಮಾಬಾದ್‌ ಜಿಲ್ಲೆಯಲ್ಲಿಮಹಾನಗರ ಪಾಲಿಕೆ ಚುನಾವಣೆ ರ್‍ಯಾಲಿಯನ್ನು ಉದ್ದೇಶಿಸಿಮಾತನಾಡಿದ ಓವೈಸಿ,‘ಐದು ವರ್ಷದಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಎನ್‌ಡಿಎ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇದೀಗ ಆರ್‌ಎಸ್‌ಎಸ್‌ ಜನರು ಎರಡು ಮಕ್ಕಳು ಮಿತಿಗೊಳಿಸುವ ಕಾನೂನಿನ ಬಗ್ಗೆ ಮಾತನಾಡುತ್ತಿದ್ದಾರೆ. ದೇಶದಲ್ಲಿ ಶೇ 60 ಜನಸಂಖ್ಯೆ 40 ವರ್ಷದೊಳಗಿನ ಯುವಜನರಾಗಿದ್ದು, ಇವರಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಆರ್‌ಎಸ್‌ಎಸ್‌ ಹಾಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿದರು.

‘2018ರಲ್ಲಿ ಪ್ರತಿ ದಿನ 36 ನಿರುದ್ಯೋಗಿ ಯುವಜನರು ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಮಗೆ ನಾಚಿಕೆಯಾಗಬೇಕು’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT