ಶನಿವಾರ, ಅಕ್ಟೋಬರ್ 19, 2019
28 °C

ಚಿದಂಬರಂ ಏಮ್ಸ್‌ ಆಸ್ಪತ್ರೆಗೆ

Published:
Updated:

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಅಕ್ರಮ ವಿದೇಶಿ ಬಂಡವಾಳ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಶನಿವಾರ ರಾತ್ರಿ ಅನಾರೋಗ್ಯದ ಕಾರಣ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಚಿದಂಬರಂ ಅವರನ್ನು ದೆಹಲಿಯ ತಿಹಾರ್‌ ಜೈಲಿನಲ್ಲಿ ಇರಿಸಲಾಗಿದೆ. ತಮಗೆ ಹೊಟ್ಟೆ ನೋವಿದೆ ಎಂದು ಚಿದಂಬರಂ ಅವರು ಶನಿವಾರ ಸಂಜೆ ಹೇಳಿದ್ದಾರೆ. ಆರಂಭದಲ್ಲಿ ಆಸ್ಪತ್ರೆ ವೈದ್ಯರೇ, ಅವರನ್ನು ಪರಿಶೀಲಿಸಿದ್ದಾರೆ. ನೋವು ಕಡಿಮೆಯಾಗದ ಕಾರಣ ಅವರನ್ನು ಏಮ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Post Comments (+)