ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಪ್ರದೇಶ ಮುಕ್ತಗೊಳಿಸಿದ ಪಾಕಿಸ್ತಾನ

ನಾಲ್ಕೂವರೆ ತಿಂಗಳ ನಂತರ ವಿಮಾನಗಳ ಹಾರಾಟಕ್ಕೆ ಅವಕಾಶ
Last Updated 16 ಜುಲೈ 2019, 17:15 IST
ಅಕ್ಷರ ಗಾತ್ರ

ನವದೆಹಲಿ: ವಿಮಾನಗಳ ಹಾರಾಟಕ್ಕೆ ಪಾಕಿಸ್ತಾನ ವಾಯುಪ್ರದೇಶವನ್ನು ಮಂಗಳವಾರ ಮುಕ್ತಗೊಳಿಸಿದೆ.

ಬಾಲಾಕೋಟ್‌ ದಾಳಿ ನಡೆದ ನಂತರ ವಾಯುಪ್ರದೇಶದ ಮೇಲೆ ಪಾಕ್‌ ನಿರ್ಬಂಧ ಹೇರಿತ್ತು. ನಾಲ್ಕೂವರೆ ತಿಂಗಳ ನಂತರ ಇದನ್ನು ತೆರವುಗೊಳಿಸಿದೆ.

‘ಎಲ್ಲಾ ರೀತಿಯ ವಿಮಾನಗಳ ಹಾರಾಟಕ್ಕೆ ವಾಯುಪ್ರದೇಶ ಮುಕ್ತಗೊಳಿಸಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ’ ಎಂದು ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

ಕಡಿಮೆಯಾದ ಏರ್‌ ಇಂಡಿಯಾ ಕಾರ್ಯಾಚರಣಾ ವೆಚ್ಚ

ವಾಯುಪ್ರದೇಶವನ್ನು ಪಾಕಿಸ್ತಾನ ಮುಕ್ತಗೊಳಿಸಿದ್ದರಿಂದ ಏರ್ ಇಂಡಿಯಾಕ್ಕೆ ಕಾರ್ಯಾಚರಣಾ ವೆಚ್ಚ ಕಡಿಮೆಯಾಗಲಿದೆ.

ಅಮೆರಿಕ ಮತ್ತು ಯುರೋಪ್‌ಗಳಿಗೆ ಒಂದು ಮಾರ್ಗದ ಕಾರ್ಯಾಚರಣಾ ವೆಚ್ಚ ಕ್ರಮವಾಗಿ ₹20 ಲಕ್ಷ ಮತ್ತು ₹5 ಲಕ್ಷ ಇಳಿಕೆಯಾಗಲಿದೆ.

‘ವಿಮಾನದ ಬಳಕೆಯೂ ಹೆಚ್ಚಲಿದೆ. ಅಲ್ಲದೆ ಸಿಬ್ಬಂದಿ ಅಗತ್ಯವು ಶೇ 25 ರಷ್ಟು ಕಡಿಮೆಯಾಗಲಿದೆ’ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT