ಗುರುವಾರ , ಡಿಸೆಂಬರ್ 12, 2019
17 °C
ಸಂಸತ್ ಚಳಿಗಾಲದ ಅಧಿವೇಶನ

ಕಾಶ್ಮೀರದಲ್ಲಿ ಕರ್ಫ್ಯೂ ಇಲ್ಲ, ಸಹಜ ಸ್ಥಿತಿ: ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿಕೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಅಮಿತ್ ಶಾ (ಸಂಗ್ರ ಚಿತ್ರ)

ನವದೆಹಲಿ: ಜಮ್ಮು–ಕಾಶ್ಮೀರದಲ್ಲಿ ಕರ್ಫ್ಯೂ ಹೇರಲಾಗಿಲ್ಲ. ರಾಜ್ಯವು ಸಹಜ ಸ್ಥಿತಿಗೆ ಮರಳಿದೆ ಎಂದು ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ತಿಳಿಸಿದರು.

ಕಾಶ್ಮೀರದ ಸ್ಥಿತಿಗತಿ ವರದಿ ಮಂಡಿಸಿದ ಅವರು ಜಮ್ಮು–ಕಾಶ್ಮೀರದಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿರುವ ಕ್ರಮವನ್ನು ಸಮರ್ಥಿಸಿದರು. ಈ ವಿಚಾರದಲ್ಲಿ ಮುಂದಿನ ನಿರ್ಧಾರವನ್ನು ಸ್ಥಳಿಯಾಡಳಿತ ಪರಾಮರ್ಶಿಸಲಿದೆ ಎಂದು ಅವರು ಹೇಳಿದರು.

ಕಾಶ್ಮೀರ ಪ್ರದೇಶದಲ್ಲಿಯೂ ಪಾಕಿಸ್ತಾನದ ಕುಮ್ಮಕ್ಕಿನಿಂದ ಚಟುವಟಿಕೆಗಳು ನಡೆಯುತ್ತಿವೆ. ಹೀಗಾಗಿ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗಿದೆ. ಯಾವಾಗ ಅಂತರ್ಜಾಲ ಸೇವೆ ಪುನರಾರಂಭಿಸಬೇಕು ಎಂಬುದನ್ನು ಸಂದರ್ಭ ನೋಡಿಕೊಂಡು ಅಲ್ಲಿನ ಆಡಳಿತವೇ ನಿರ್ಧರಿಸಲಿದೆ ಎಂದು ಶಾ ಹೇಳಿದರು.

ಇದನ್ನೂ ಓದಿ: ರಾಜ್ಯಸಭೆ| ಎಸ್‌ಪಿಜಿ ಭದ್ರತೆ ಹಿಂತೆಗೆತದಲ್ಲಿ ರಾಜಕೀಯವಿಲ್ಲ: ಕೇಂದ್ರ ಸ್ಪಷ್ಟನೆ

ಜಮ್ಮು–ಕಾಶ್ಮೀರದ ಯಾವುದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಕರ್ಫ್ಯೂ ಹೇರಲಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. ಕಣಿವೆ ರಾಜ್ಯದಲ್ಲಿ ಔಷಧಿಗಳ ಲಭ್ಯತೆ ಸಮರ್ಪಕವಾಗಿದೆ. ಸಂಚಾರಿ ಔಷಧಿ ವಾಹನಗಳೂ ಕಾರ್ಯಾಚರಿಸುತ್ತಿವೆ. ಆರೋಗ್ಯ ಸೇವೆಗಳ ಬಗ್ಗೆ ಆಡಳಿತವು ಗಮನಹರಿಸಿದೆ ಎಂದು ಶಾ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು