ದೀಪಾವಳಿ ವೇಳೆಗೆ ಗೋವಾಕ್ಕೆ ಪರ್ರೀಕರ್‌: ಶ್ರೀಪಾದ್ ನಾಯಕ್‌

7
ಸೆಪ್ಟೆಂಬರ್‌ 15ಕ್ಕೆ ಏಮ್ಸ್‌ಗೆ ದಾಖಲು

ದೀಪಾವಳಿ ವೇಳೆಗೆ ಗೋವಾಕ್ಕೆ ಪರ್ರೀಕರ್‌: ಶ್ರೀಪಾದ್ ನಾಯಕ್‌

Published:
Updated:
Deccan Herald

ಪಣಜಿ: ‘ದೆಹಲಿಯ ಅಖಿಲ ಭಾರತೀಯ ವೈದ್ಯವಿಜ್ಞಾನ ಸಂಸ್ಥೆಯಲ್ಲಿ  (ಏಮ್ಸ್‌) ಚಿಕಿತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ಅವರು ಇದೇ ದೀಪಾವಳಿ ಹಬ್ಬದ ವೇಳೆಗೆ ಗೋವಾಕ್ಕೆ ಹಿಂತಿರುಗುವ ಸಾಧ್ಯತೆಯಿದೆ’ ಎಂದು ಕೇಂದ್ರ ಸಚಿವ ಶ್ರೀಪಾದ್‌ ನಾಯಕ್‌ ತಿಳಿಸಿದ್ದಾರೆ.

ಗೋವಾ ಬಿಜೆಪಿ ಘಟಕದ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ವಿನಯ್‌ ತೆಂಡೂಲ್ಕರ್‌ ನೇತೃತ್ವದಲ್ಲಿ ಶುಕ್ರವಾರ ಬಿಜೆಪಿಯ ನಿಯೋಗ ಪರ್ರೀಕರ್‌ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು. 

ಬಳಿಕ ಮಾತನಾಡಿದ ನಾಯಕ್‌, ‘ ಗೋವಾದಲ್ಲಿನ ಆಡಳಿತದ ಬಗ್ಗೆ ಭೇಟಿ ವೇಳೆ, ಚರ್ಚೆ ನಡೆಯಿತು. ದೀಪಾವಳಿ ವೇಳೆಗೆ ಪರ್ರೀಕರ್‌ ರಾಜ್ಯಕ್ಕೆ ಬರುವ ಸಾಧ್ಯತೆಯಿದೆ’ ಎಂದು ತಿಳಿಸಿದರು.

ಈಗಿರುವ ಸಚಿವರಿಗೆ ಹೆಚ್ಚುವರಿ ಖಾತೆ ಹಂಚುವ ಕುರಿತಂತೆ ಚರ್ಚೆ ನಡೆಸಲಾಯಿತು. 

ಮೈತ್ರಿ ಮುಖಂಡರ ಜೊತೆಗೆ ಚರ್ಚೆ: ಇದಕ್ಕೂ ಮುನ್ನ, ಮೈತ್ರಿಪಕ್ಷಗಳಾದ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಮತ್ತು ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‍ಪಿ) ಪಕ್ಷಗಳ ಜತೆಗಿನ ಮೈತ್ರಿ ಬಗ್ಗೆಯೂ ಚರ್ಚೆ ನಡೆಸಿದರು.

ಪ್ಯಾಂಕ್ರಿಯಾಟಿಕ್ ಸಮಸ್ಯೆಯಿಂದ ಬಳಲುತ್ತಿರುವ ಪರ್ರೀಕರ್ ಸೆಪ್ಟೆಂಬರ್ 15ರಂದು ಏಮ್ಸ್ ಗೆ ದಾಖಲಾಗಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !